ಸಂಡೂರಿನಲ್ಲಿ ದಸಂಸಯ ಸುವರ್ಣ ಸಂಭ್ರಮ ಫೆ.18ಕ್ಕೆ

31-SanduruP4
ಸಂಡೂರಿನ ಸುವರ್ಣ ಸಂಭ್ರಮ ನಿಮಿತ್ತ ದಸಂಸ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾ ಡಿಎಸ್‌ಎಸ್ ಸಂಚಾಲಕ ವೈ.ದುರುಗಣ್ಣ, ತಾಲೂಕು ಸಂಚಾಲಕ ರಾಮಕೃಷ್ಣ ಹೆಗಡೆ, ನಿಂಗಪ್ಪ ಐಹೊಳೆ, ಪುರಸಭೆ ಸದಸ್ಯ ಎಲ್.ಎಚ್.ಶಿವಕುಮಾರ ಇದ್ದರು.
Published on

ಸಂಡೂರು: ದಸಂಸ ಸ್ಥಾಪನೆಯಾಗಿ ಜ.24ಕ್ಕೆ 50ವರ್ಷ ಪೂರ್ಣವಾಗುವ ಹಿನ್ನೆಲೆ ರಾಜ್ಯಾದ್ಯಂತ ಸುವರ್ಣ ಸಂಭ್ರಮ ಆಚರಿಸಲಾಗುವುದು. ಪಟ್ಟಣದಲ್ಲಿ ಫೆ.18ರಂದು ಕಾರ್ಯಕ್ರಮ ಆಯೋಜನೆಗೆ ತಿರ್ಮಾನಿಸಲಾಗಿದೆ ಎಂದು ತಾಲೂಕು ಸಂಚಾಲಕ ರಾಮಕೃಷ್ಣ ಹೆಗಡೆ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ದಲಿತ ಸುವರ್ಣ ಸಂಭ್ರಮ ನಿಮಿತ್ತ ಸಂಡೂರಿನ ದಸಂಸ ಸಮಿತಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಡಿಎಸ್‌ಎಸ್ ಸಂಚಾಲಕ ವೈ.ದುರುಗಣ್ಣ, ಸಮುದಾಯದ ಅಧ್ಯಕ್ಷ ನಿಂಗಪ್ಪ ಐಹೊಳೆ, ಪುರಸಭೆ ಸದಸ್ಯ ಎಲ್.ಎಚ್.ಶಿವಕುಮಾರ, ಕೊಟಿಗಿನಾಳ್ ಮಲ್ಲಿಕಾರ್ಜುನ, ಮಲ್ಲೇಶ್ ಕಮತೂರು, ಕುಮಾರ್ ವೈಟಿಜಿ, ಗಂಗಪ್ಪ ಹೊಸಳ್ಳಿ, ಪಂಪಾಪತಿ, ಬಸವರಾಜ್ ಬ್ರೂಸ್ಲಿ, ಗಣೇಶ್, ಅಪ್ಪೇನಳ್ಳಿ ಭರ್ಮಪ್ಪ,

ರವಿಕುಮಾರ್ ನಾಗಲಾಪುರ, ಎನ್‌ಎಂಡಿಸಿ ಪಂಪಾಪತಿ ರಾಮಸ್ವಾಮಿ ಹೊಸಳ್ಳಿ, ರಾಮಣ್ಣ, ದೇವೇಂದ್ರಪ್ಪ, ಗಂಗಾಧರ ಅಂತಾಪುರ, ರಮೇಶ್ ಬಂಡ್ರಿ, ಹುಲುಗಪ್ಪ ಬುಡ್ಡೇನಳ್ಳಿ, ನವಲೂಟಿ ಅಣ್ಣಯ್ಯ, ತೋರಣಗಲ್ ಅಂಜಿನಿ, ಮಾರುತಿ, ತಾಯಣ್ಣ ಅಪ್ಪೇನಳ್ಳಿ, ರಮೇಶ, ಬೂದೇರ್ ತಾಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net