ಕೋಡಿಬಿದ್ದ ಹಾವಿನಮಡುಗು ಕೆರೆ

Untitled design (23)
ಮಳೆಯಿಂದಾಗಿ ಸಂಡೂರು ತಾಲೂಕು ತೋರಣಗಲ್ ಹೋಬಳಿಯ ಹಾವಿನಮಡುಗು ಕೆರೆ ಕೋಡಿ ಹರಿದಿದೆ.
Published on

ಸಂಡೂರು: ತಾಲೂಕಿನಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದೆ. ತೋರಣಗಲ್ ಹೋಬಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಿಠಲಾಪುರ ಗ್ರಾಮದ ಲಕ್ಷ್ಮಮ್ಮ ಹಾಲಪ್ಪರ ಅವರ ಮೆಣಸಿನಕಾಯಿ ಬೆಳೆದ ಜಮೀನಿಗೆ ಮಳೆ ನೀರಿನೊಂದಿಗೆ ಕಲ್ಲುಗಳು, ತ್ಯಾಜ್ಯ ಹರಿದು ಬಂದಿದ್ದು ಬೆಳೆ ಹಾನಿಯಾಗಿದೆ.

ವಿಠಲಾಪುರದ ಹಾವಿನಮಡುಗು ಕೆರೆ ತುಂಬಿ ಕೋಡಿ ಬಿದ್ದಿದೆ. ಕುರೇಕುಪ್ಪದಲ್ಲಿ 86.02 ಮಿ.ಮೀ, ವಿಠಲಾಪುರದಲ್ಲಿ 88.8, ಸಂಡೂರು 15.6, ಚೋರುನೂರಿನಲ್ಲಿ 6.4ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net