ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Sandur Sports
ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಸಂಡೂರು ತಾಲೂಕು ಕೃಷ್ಣಾನಗರದ ಬಿಕೆಜಿ ಪಪೂ ಕಾಲೇಜಿನ ವಿದ್ಯಾರ್ಥಿಗಳು. ಕಾಲೇಜಿನ ಪ್ರಾಚಾರ್ಯ ಮೋಹನರಾವ್, ಶಿಕ್ಷಕರಾದ ರಾಮಣ್ಣ ಹುಗ್ಗಿ, ವರ್ಧಮಾನ್, ಪ್ರಮುಖರಾದ ನಟರಾಜ್, ಸಾಯಿಬಾಬಾ, ವಾಣಿ, ಸಂತೋಷ್ ಇತರರಿದ್ದರು.
Published on

ಸಂಡೂರು: ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟದಲ್ಲಿ ಕೃಷ್ಣಾನಗರ ಸಮೀಪದ ಬಿಕೆಜಿ ಪಪೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ರಿಲೇ (4/400)ಯಲ್ಲಿ ಈ.ಲಕ್ಷ್ಮೀ, ಸೌಮಶ್ರೀ, ಭೂಮಿಕಾ, ಅಮೃತಾ ಇಲ್ಲೂರು (ಪ್ರಥಮ), ಎತ್ತರ ಜಿಗಿತದಲ್ಲಿ ದಾನಿಯ ಮತ್ತು ರೋಹಿತ್ (ಪ್ರಥಮ), ಪಿ.ರಿದ್ದಿಜೈನ್ (ದ್ವಿತೀಯ), 110 ಮೀ. ಓಟದಲ್ಲಿ ಮಹ್ಮದ್ ಸಮಿ, ಸಿಂಚನಾ ಎಂ.ಆಚಾರ್ಯ (ದ್ವಿತೀಯ), 200 ಮೀ. ಓಟದಲ್ಲಿ ಸೌಮ್ಯಶ್ರೀ, ಮಹಮದ್ ಸಮಿ (ದ್ವಿತೀಯ), 4/100 ರಿಲೇ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಬಿ.ಚಿನ್ಮಯಶೆಟ್ಟಿ, ವಿಸ್ಮಯ್ ಬಾವಿಕಟ್ಟಿ, ವೀರೇಶ್, ಎಂ.ಜಿ.ಮುಜಾಹಿದ್ದೀನ್ (ದ್ವಿತೀಯ) ಹಾಗೂ ಟಿ.ಸ್ನೇಹಾ, ಬಿ.ಅನನ್ಯಗೌಡ, ಅಮೃತ ಇಲ್ಲೂರು, ಸಿಂಚನಾ ಎಂ.ಆಚಾರ್ಯ (ತೃತೀಯ).

4/400 ಮೀ.ಬಾಲಕರ ವಿಭಾಗದ ರಿಲೇಯಲ್ಲಿ ಅಕ್ಷಯ್, ವೈ.ಮಣಿಕಂಠ, ರಘು, ಜಿ.ವಿ.ಶ್ರೀನಿವಾಸ್ (ದ್ವಿತೀಯ), ತಟ್ಟೆ ಎಸೆತದಲ್ಲಿ ಬಿ.ಜೋಯಷ್ (ದ್ವಿತೀಯ), ರಾಮ್ ಪ್ರಸಾದ್ (ತೃತೀಯ), ಭರ್ಚಿ ಎಸೆತದಲ್ಲಿ ಸಿಂಚನಾ ಎಂ.ಆಚಾರ್ಯ (ಪ್ರಥಮ), ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಎನ್.ಆರ್.ಅರುಂಧತಿ (ದ್ವಿತೀಯ), ಕೆ.ಪ್ರಸನ್ನ ತೃತೀಯ ಸ್ಥಾನ ಪಡೆದಿದ್ದಾರೆ.

ಥ್ರೋಬಾಲ್‌ನಲ್ಲಿ ರಾಮ್ ಪ್ರಸಾದ್, ಮಣಿಕುಮಾರ್ ನಾಯಕ್, ರೋಹಿತ್ ರೆಡ್ಡಿ, ಜಿ.ಸಾಯಿಚಂದ್, ಬಿ.ಚಿನ್ಮಯಶೆಟ್ಟಿ, ಅರಿಹಂತ ದೋಕ, ಬಿ.ಜೋಯಷ್, ಕೆ.ಅಶುತೋಷ್, ವಿಸ್ಮಯ್ ಬಾವಿಕಟ್ಟಿ, ಬೋಯ ದೇವರಯ್ಯ, ಗೌತಮ ರೆಡ್ಡಿ, ರವಿಪ್ರಸಾದ್ (ದ್ವಿತೀಯ).

ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಬಿ.ಅನನ್ಯ ಗೌಡ, ಹರ್ಷಿತಾ ಜೈನ್ ಪ್ರಥಮ ಸ್ಥಾನ ಪಡೆದರೆ, ಸಿಂಗಲ್ಸ್‌ನಲ್ಲಿ ಎ.ರಾಣಿ, ಸಿ.ಬಿ.ಅಭಿನವ್ ಹಾಗೂ ಚದುರಂಗದಾಟದಲ್ಲಿ ಅಮೃತ ಇಲ್ಲೂರು, ಸಿ.ಎಚ್.ಶ್ರುತಿ, ಅಭಿಷೇಕ್ ಜೈನ್ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net