

ರಾಮನಗರ:
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಬ್ಬಡಿ ಆಟಗಾರನೊರ್ವ ಕಾಲು ಮುರಿದುಕೊಂಡು ಒಂದುಗಂಟೆಗೂ ಹೆಚ್ಚು ಕಾಲ ಮೈದಾನದಲೇ ನೋವಿನಿಂದ ನರಳಾಡಿದ ಪ್ರಸಂಗ ಚನ್ನಪಟ್ಟಣ ನಗರದಲ್ಲಿ ನಡೆದಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರತಿ ವರ್ಷ ದಸರಾ ಕ್ರೀಡಾಕೂಟ ಆಯೋಜಿಸುತ್ತಿದ್ದು, ಈ ವರ್ಷವೂ ಸಹ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಕ್ರೀಡಾ ಕೂಟ ಆಯೋಜಿಸಲಾಗಿತ್ತು.
ಶುಕ್ರವಾರ ತಾಲೂಕುಮಟ್ಟದ ಈ ಕ್ರೀಡಾಕೂಟಕ್ಕೆ ಚಾಲನೆ ಸಹ ನೀಡಲಾಗಿತ್ತು. ಈ ವೇಳೆ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ತಿಟ್ಟಮಾರನಹಳ್ಳಿ ಗ್ರಾಮದ ಕ್ರೀಡಾಪಟು ಸಚಿನ್ ಎಂಬುವನ ಕಾಲು ಮುರಿತವಾಗಿದೆ.
ಈ ವೇಳೆ ಆಟಗಾರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಆಗಲಿ, ಇನ್ಯಾವುದೇ ವಾಹನವಾಗಲಿ ಇಲ್ಲದ ಕಾರಣ ಆಟಗಾರ ಒಂದು ಗಂಟೆ ಕಾಲ ನೋವಿನಲ್ಲೆ ಮೈದಾನದಲ್ಲಿ ಕಾಲ ಕಳೆಯುವಂತಾಗಿದೆ. ಈ ಮಧ್ಯೆ ಕ್ರೀಡಾಕೂಟಕ್ಕೆ ಸಂಬಂಧಿಸಿದ ಯಾವ ಅಧಿಕಾರಿಯೂ ಸಹ ಇತ್ತ ತಲೆಹಾಕದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
.