ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ

Sandur Ncc
ತೋರಣಗಲ್ ರೈಲ್ವೆ ನಿಲ್ದಾಣದ ಪ್ರದೇಶದಲ್ಲಿ ಏರ್ಪಡಿಸಿದ್ದ ಎನ್‌ಸಿಸಿ ವಿದ್ಯಾರ್ಥಿಗಳ ಶಿಬಿರದಲ್ಲಿ ಎನ್‌ಸಿಸಿ ತರಬೇತಿ ಅಧಿಕಾರಿ ನಾಗರಾಜ್ ಹುಣಿಸಿಕಟ್ಟಿ ಮಾತನಾಡಿದರು. ವೈದ್ಯೆ ಡಾ.ಪ್ರಿಯಾಂಕ, ಎಎಂಒ ರಾಘವೇಂದ್ರ, ರವಿ ನಾಮ್‌ದೇವ್, ರಾಮಸ್ವಾಮಿ ಇದ್ದರು.
Published on

ಸಂಡೂರು: ಆರೋಗ್ಯವಾಗಿರಲು ಉತ್ತಮ ಆಹಾರ, ನಿರಂತರ ವ್ಯಾಯಾಮ, ಯೋಗ, ಧ್ಯಾನ ಮಾಡುವುದರೊಂದಿಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎನ್‌ಸಿಸಿ ತರಬೇತಿ ಅಧಿಕಾರಿ ನಾಗರಾಜ್ ಹುಣಿಸಿಕಟ್ಟಿ ಹೇಳಿದರು.

ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದ ಎನ್‌ಸಿಸಿ ಕ್ಯಾಂಪ್ ಆವರಣದಲ್ಲಿ ರಾಜ್ಯದ ಆಯ್ದ ಜಿಲ್ಲೆಗಳಿಂದ ಬಂದ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಹತ್ತು ದಿನಗಳ ಶಿಬಿರದಲ್ಲಿ ಸೋಮವಾರ ಮಾತನಾಡಿದರು. ಶಿಬಿರದಲ್ಲಿ ಶಿಸ್ತು, ಸಂಯಮ, ದೇಶಪ್ರೇಮ ಹಾಗೂ ಸಮಾಜ ಸೇವೆಗಳ ಮಹತ್ವ ತಿಳಿಸಲಾಗುತ್ತದೆ.

ಹದಿಹರೆಯದವರ ವಯಸ್ಸಿನಲ್ಲಿ ಆಗುವ ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು ಎಂದು ತಿಳಿಸಿದರು.

ವೈದ್ಯೆ ಪ್ರಿಯಾಂಕಾ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಮಾತನಾಡಿದರು. ಎಎಂಒ ರಾಘವೇಂದ್ರ, ರವಿ ನಾಮ್‌ದೇವ್, ರಾಮಸ್ವಾಮಿ, ಶಿವರಾಮ್, ಸಂದೀಪ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಶುಶ್ರೂಷಕ ಮಾರೇಶ್, ಸಿದ್ದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net