More

    ಎನ್‌ಸಿಸಿಯಿಂದ ಮಕ್ಕಳಲ್ಲಿ ಉದಾತ್ತ ಮೌಲ್ಯಗಳು ಹೆಚ್ಚಳ

    ಸಂಡೂರು: ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು, ಸಾಮಾಜಿಕ ಕಳಕಳಿ, ಉದಾತ್ತ ಮೌಲ್ಯಗಳನ್ನು ಬೆಳೆಸಲು ಹಾಗೂ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸ್ಕೌಟ್ಸ್ ಮತ್ತು ಗೈಡ್ಸ್‌, ಎನ್‌ಎಸ್‌ಎಸ್, ಎನ್‌ಸಿಸಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಾಸಕ ಈ.ತುಕಾರಾಮ್ ಹೇಳಿದರು.

    ಇದನ್ನೂ ಓದಿ: ಎಟಿಎನ್‌ಸಿಸಿಯಲ್ಲಿ ಸಾಂಪ್ರದಾಯಿಕ ಉಡುಗೆ ಸಂಭ್ರಮ

    ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ನೂತನ ಘಟಕಗಳನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
    ಕ್ರಿಶ್ಚಿಯನ್ ಸಂಸ್ಥೆಗಳು ಶಿಕ್ಷಣ ಹಾಗೂ ಆರೋಗ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿವೆ.

    ಕೃಪಾನಿಲಯ ಸಂಸ್ಥೆ ಪಟ್ಟಣ ಜನತೆಗೆ ಆಸ್ಪತ್ರೆ ಹಾಗೂ ಶಾಲೆಯ ಮೂಲಕ ಉತ್ತಮ ಸೇವೆಯನ್ನು ನೀಡುತ್ತಿದೆ. ಶಾಲೆಯಲ್ಲಿ ಕಾಲೇಜು ಆರಂಭಿಸಲು ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಕೃಪಾನಿಲಯ ಶಾಲೆಗೆ 5 ಲಕ್ಷ ಮೊತ್ತದಲ್ಲಿ ಕ್ರೀಡಾ ಪರಿಕರಗಳನ್ನು ಒದಗಿಸುವ ಜತೆಗೆ ಡಿಜಿಟಲ್ ಲೈಬ್ರರಿ, ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇನೆ.

    ಸಂತೋಷ್ ಲಾಡ್ ಫೌಂಡೇಶನ್‌ಯಿಂದ ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆಯುವ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತಿಯ ಹಾಗೂ ತೃತಿಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಕ್ರಮವಾಗಿ 15ಸಾವಿರ, ಹತ್ತು ಸಾವಿರ, ಹಾಗೂ 5ಸಾವಿರ ರೂ.ನಗದು ಬಹುಮಾನ ನೀಡಲು ಬೇಕಾದ ಹಣವನ್ನು ಸಂಸ್ಥೆ ಹೆಸರಿನಲ್ಲಿ ಡಿಪಾಸಿಟ್ ಮಾಡಲಾಗುವುದು.

    ತಾಲೂಕಿನಲ್ಲಿಯ ಸ್ಕೌಟ್ಸ್ ಮತ್ತು ಗೈಡ್ಸ್‌ಗಳಿಗೆ ಇನ್ನೆರಡು ತಿಂಗಳಲ್ಲಿ 2500 ಸಮವಸ್ತ್ರವನ್ನು ಒದಗಿಸಲಾಗುವುದು.ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಂತ ಕಚೇರಿಯನ್ನು ಹೊಂದಲು ಅಗತ್ಯ ಕಟ್ಟಡವನ್ನು ನಿರ್ಮಿಸಿಕೊಡಲಾಗುವುದು. ತಾಲೂಕಿನಲ್ಲಿ ಶೇ.76ರಷ್ಟು ಸಾಕ್ಷರತೆ ಇದೆ. ಇದನ್ನು ಶೇ100ಕ್ಕೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

    ಬಿಇಒ ಡಾ.ಐ.ಆರ್.ಅಕ್ಕಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ತಾಲೂಕು ಘಟಕದ ಕಾರ್ಯದರ್ಶಿ ಜಿ.ಎಸ್.ಸೋಮಪ್ಪ, ಖಜಾಂಚಿ ಮಹಮ್ಮದ್ ಜಾವೀದ್, ಕೃಪಾನಿಲಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶೆರ್ಲಿ, ಶಿಕ್ಷಕರಾದ ಚಂದ್ರಹಾಸ್, ಪರಶುರಾಮ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts