

ಗುಬ್ಬಿ: ತಹಸೀಲ್ದಾರ್ ವಸತಿ ಗೃಹದಲ್ಲಿ ಬೆಳೆದಿದ್ದ ಗಂಧದ ಮರಗಳನ್ನು ಅಕ್ರಮವಾಗಿ ಕಡಿಯಲಾಗಿರುವ ಟನೆ ಗುರುವಾರ ಬೆಳಗಿನಜಾವ ನಡೆದಿದೆ.
ಪಟ್ಟಣದ ತಾಲೂಕು ಕಚೇರಿಯ ಕೂಗಳತೆ ದೂರದಲ್ಲಿರುವ ಎಂ.ಜಿ.ರಸ್ತೆಯ ತಾಲೂಕು ದಂಡಾಧಿಕಾರಿಗಳ ವಸತಿಗೃಹದ ಆವರಣಲ್ಲಿದ್ದ 6 ಗಂಧದ ಮರಗಳ ಪೈಕಿ ಎರಡು ಮರಗಳನ್ನು ಮಧ್ಯಭಾಗದವರೆಗೆ ಕಡಿದಿದ್ದು ಮತ್ತೊಂದು ಮರವನ್ನು ಬುಡಸಹಿತ ಕಡಿದು ಹಾಕಲಾಗಿದೆ.
ನಂತರ ಪಟ್ಟಣದ ಹಳೇ ಏಕೆ ಕಾಲೋನಿ ಬಳಿಯ ಸರ್ಕಾರಿ ಶಾಲೆ ಮುಂಭಾಗವಿದ್ದ ಗಂಧದ ಮರವನ್ನು ಬುಡ ಸಮೇತ ಕಡಿದು ಉರುಳಿಸಲಾಗಿದೆ.
ತಹಸೀಲ್ದಾರ್ ವಸತಿಗೃಹ ಆವರಣದಲ್ಲಿ ಈ ಟನೆ ನಡೆದಿದ್ದು ಗಂದಧ ಮರಗಳನ್ನು ಕಡಿದಿರುವ ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.