ಮರಳು ವಾಹನಗಳ ಸಂಚಾರ ನಿಯಂತ್ರಿಸಿ

15mnv01
ಮಾನ್ವಿಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಟರಾಜಗೆ ಕೋನಾಪುರ ಪೇಟೆಯ ನಿವಾಸಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಪ್ರವೀಣ್ ಕುಮಾರ್, ಮಲ್ಲೇಶ ಜಗ್ಲಿ, ರಾಮಕೃಷ್ಣ, ನಾರಾಯಣಸ್ವಾಮಿ, ರವಿಕುಮಾರ, ಉರುಕುಂದ ಇತರರಿದ್ದರು.
Published on

ಮಾನ್ವಿ: ಪಟ್ಟಣದ ಕೋನಾಪುರ ಪೇಟೆ ಜನವಸತಿ ಪ್ರದೇಶದಲ್ಲಿ ಬೃಹತ್ ಲಾರಿಗಳ ಓಡಾಟದಿಂದ ತೊಂದರೆಯಾಗುತ್ತಿದ್ದು, ಸಂಚಾರ ನಿಯಂತ್ರಿಸಬೇಕೆಂದು ಒತ್ತಾಯಿಸಿ ಪೇಟೆಯ ನಿವಾಸಿಗಳು ಪ್ರತಿಭಟನೆ ನಡೆಸಿ, ಸಮಾಜ ಕಲ್ಯಾಣಾಧಿಕಾರಿ ನಟರಾಜಗೆ ಮನವಿ ಸಲ್ಲಿಸಿದರು.

ಚೀಕಲಪರ್ವಿ, ಯಡಿವಾಳ, ಮದ್ಲಾಪುರ ಗ್ರಾಮದಲ್ಲಿನ ತುಂಗಭದ್ರ ನದಿಯಿಂದ ಮರಳನ್ನು ಪಡೆದು ಲಾರಿಗಳಲ್ಲಿ ಮೂಲಕ ಸಾಗಿಸಲಾಗುತ್ತಿದೆ. ಚಾಲಕರು ಎರ‌್ರಾಬರ‌್ರಿಯಾಗಿ ಚಲಾಯಿಸುತ್ತಿದ್ದು, ಜನರು ಭಯದೊಂದಿಗೆ ಓಡಾಡುವಂತಾಗಿದೆ.

ಜಲ್ಲಿಕಲ್ಲುಗಳನ್ನು ಭಾರಿ ವಾಹನಗಳಲ್ಲಿ ಸಾಗಣೆ ಮಾಡಲಾಗುತ್ತಿದೆ. ಹೀಗಾಗಿ ವೃದ್ಧರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ. ಈ ಕುರಿತು ತಾಲೂಕು ಆಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮರಳು, ಜಲ್ಲಿಕಲ್ಲು ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಪ್ರವೀಣ್ ಕುಮಾರ್, ಮಲ್ಲೇಶ ಜಗ್ಲಿ, ರಾಮಕೃಷ್ಣ, ನಾರಾಯಣಸ್ವಾಮಿ, ರವಿ ಪುಟ್ಟ, ರವಿಕುಮಾರ, ಉರುಕುಂದ, ಲಕ್ಷ್ಮಣ್, ರಮೇಶ, ಅವಿನಾಶ್, ಬಲರಾಮ, ಬಸವನಾಯಕ, ರಂಗನಾಥನಾಯಕ, ಜಯಪ್ರಕಾಶ, ಕೆ.ರೇಣುಕಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net