

ಆನಂದಪುರ: ಆಚಾಪುರ ಗ್ರಾಪಂ ವ್ಯಾಪ್ತಿಯ ಮೂಡಹಾಗಲು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆಯೇ ಜನವಸತಿ ಪ್ರದೇಶದಲ್ಲಿ ಕಾಡಾನೆಗಳು ಸಂಚರಿಸಿವೆ. ಅನಿರೀಕ್ಷಿತವಾಗಿ ಕಾಡಾನೆ ಕಂಡು ಜನ ಭಯಗೊಂಡಿದ್ದಾರೆ. ಲಕ್ಷ್ಮಣಪ್ಪ ಎಂಬುವರ ಮನೆ ಸಮೀಪ ಬಂದಿದ್ದ ಆನೆಯನ್ನು ಕಂಡು ಕುಟುಂಬಸ್ಥರು ಕೂಗಿಕೊಂಡಿದ್ದಾರೆ. ಅಕ್ಕ ಪಕ್ಕದ ಮನೆಯವರು ಆಗಮಿಸಿ ಜೋರಾಗಿ ಬೊಬ್ಬೆ ಹಾಕಿ ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ. ಎರಡು ಆನೆ ಒಟ್ಟಿಗೆ ಇದ್ದು, ಇನ್ನೊಂದು ದೂರದಲ್ಲಿತ್ತು. ಇದುವರೆಗೆ ಅಡಕೆ ತೋಟ, ಭತ್ತದ ಗದ್ದೆ, ಕಬ್ಬಿನ ಹೊಲಕ್ಕೆ ದಾಳಿ ಮಾಡುತ್ತಿದ್ದ ಕಾಡಾನೆಗಳು ಈಗ ಗ್ರಾಮದ ಸಮೀಒ ಓಡಾಡುತ್ತಿರುವುದಕ್ಕೆ ಜನ ಭಯಗೊಂಡಿದ್ದಾರೆ.