

ಕುಂದಾಪುರ: ಶಿವರಾತ್ರಿ ಪ್ರಯುಕ್ತ ಕೋಟೇಶ್ವರ ಕೋಡಿ ಬೀಚ್‌ನಲ್ಲಿ ಬಿಲ್ವಪತ್ರೆ, ರುದ್ರಾಕ್ಷಿಮಾಲಾವೃತ ಶಿವಲಿಂಗವು ನಂದಿ ಮತ್ತು ಹಾವಿನೊಳಗೊಂಡ ಪಾಳುಬಿದ್ದ ಗುಡಿಯ ಪರಿಕಲ್ಪನೆಯಲ್ಲಿ 12 ಅಡಿ ಅಗಲ ಮತ್ತು 4 ಅಡಿ ಎತ್ತರದ ಮರಳು ಶಿಲ್ಪಾಕೃತಿಯನ್ನು ಕುಂದಾಪುರದ ತ್ರಿವರ್ಣ ಕಲಾ ತರಗತಿಯ 23 ವಿದ್ಯಾರ್ಥಿಗಳು ರಚಿಸಿದ್ದಾರೆ.
ಕಲಾಕೇಂದ್ರ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ ಮತ್ತು ವಿದ್ಯಾರಾಣಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅದ್ವಿತ್‌ಕುಮಾರ್, ಆರಾಂಶ್ ಪೂಜಾರಿ, ಶರಣ್ ಆರ್. ಕುಮಾರ್, ಅಯಾಂತಿಕಾ, ಕೃತಿ ದೇವಾಡಿಗ, ಸುಯೋಗ್ ಶೆಟ್ಟಿ, ಆಶಿತ್ ಸಂಜಯ್‌ಕುಮಾರ್, ನಿಹಾಲ್ ಜಿ., ಶೌರ್ಯ ಎಸ್.ಪಿ., ಸಾನಿಧ್ಯ ಸಂತೋಷ್ ನಾಯ್ಕ, ರಿಶುಜೆ. ಶೆಟ್ಟಿ, ಸಾನ್ವಿ ಎಲ್., ಯಕ್ಷತ್ ಶೆಟ್ಟಿ, ಸ್ಕಂದ, ನಿಶ್ಚಿತಾ ವಿ. ಎಚ್., ಅಮೃತ ಶೆಟ್ಟಿ, ಸನ್ನಿಧಿ ಜಿ., ಲಕ್ಷ್ಯಾ ಆರ್., ಅದ್ವಿತ್ ಎಸ್., ಅಯಂತಿಕಾ ಆರ್. ಪೂಜಾರಿ, ಪ್ರಣೀತ್ ಶೆಟ್ಟಿ, ದೃಶಿಕಾ ಪಿ. ಶೆಟ್ಟಿ, ಪ್ರಾಪ್ತಿ ಪಿ. ಶೆಟ್ಟಿ, ಆರ್ಯಾ ಬಿ. ಭಾಗವಹಿಸಿದ್ದರು.