ಮರಳು ಅಕ್ರಮ ಸಾಕ್ಷಿ ನಾಶಕ್ಕೆ ಯತ್ನ : ಅವ್ವಣ್ಣ ಮ್ಯಾಕೇರಿ ಆರೋಪ

Published on

ಅಧಿಕಾರಿಗಳು, ದಂಧೆಕೋರರ ವಿರುದ್ಧ ಕ್ರಮಕ್ಕೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಚಿತ್ತಾಪುರ ತಾಲೂಕಿನ ಭಾಗೋಡಿ ಗ್ರಾಮದ ಕಾಗಿಣಾ ನದಿ ತೀರದಲ್ಲಿ ಕೆಆರ್‌ಡಿಎಲ್‌ನಿಂದ ಅನಧಿಕೃತವಾಗಿ ಮರಳು ದಾಸ್ತಾನು ಪ್ರಕರಣ ತನಿಖೆ, ಕ್ರಮ ಆಗುವ ಮುನ್ನವೇ ರಾಯಲ್ಟಿ ನೀಡಿ ಮರಳು ಗಾರಿಕೆ ನಡೆಸುವ ಮೂಲಕ ಅಕ್ರಮದ ಸಾಕ್ಷಿ ನಾಶಕ್ಕೆ ಜಿಲ್ಲಾಡಳಿತವೇ ಪ್ರಯತ್ನಿಸಿದೆ ಎಂದು ಜಿಲ್ಲಾ ರೈತ ಹೋರಾಟ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಆರೋಪಿಸಿದರು.

ನಿರಂತರ ಹೋರಾಟದ Àಲದಿಂದ ಅಕ್ರಮ, ಅನಧಿಕೃತ ಮರಳುಗಾರಿಕೆ ನಿಲ್ಲಿಸಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಮತ್ತು ಪ್ರಾದೇಶಿಕ ಆಯುಕ್ತರು ಕ್ರಮ ಕೈಗೊಳ್ಳುವಂತೆ ವರದಿ ನೀಡಿದ್ದರೂ ಜಿಲ್ಲಾ ಟಾಸ್ಕ್ ೆÇÃರ್ಸ್ ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿಲ್ಲ. ಅಕ್ರಮದ ಸ್ಥಳಕ್ಕೆ ಭೇಟಿ ನೀಡಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಆ.೨೦ರಂದು ದಿಢೀರ್ ಎಂದು ೯೦ರಿಂದ ೧೦೦ ಟಿಪ್ಪರ್‌ಗಳು ಮರಳು ಸಾಗಣೆ ಕಂಡು ಬಂದಿದ್ದು, ಕೂಡಲೇ ಸ್ಥಗಿತಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಬಳ್ಳಾರಿ ಗಣಿ ಇಲಾಖೆ ತಂಡ ಅತ್ಯಾಧುನಿಕ ಸರ್ವೇ ನಡೆಸಲು ಸೂಚಿಸಿತ್ತು. ಆದರೆ ಸರ್ವೇ ಮುನ್ನವೇ ಸಾಕ್ಷಿ ನಾಶ ಪಡಿಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಭಾರಿ ಪ್ರಮಾಣದ ತೆರಿಗೆ ವಂಚನೆ ಆಗಲಿದೆ. ಜಿಲ್ಲಾಧಿಕಾರಿ ನಿರ್ಲಕ್ಷಿಸಿದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಅಕ್ರಮ ನಡೆದರೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದಿರುವುದು ಅನುಮಾನ ಮೂಡಿಸುತ್ತಿದೆ. ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ದಾಸ್ತಾನು ಆಗಿರುವ ಮರಳನ್ನು ವಿಲೇವಾರಿ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿವಕುಮಾರ್ ಪಾಟೀಲ್, ಬಸವರಾಜ್ ಗುಂಡಲಗೇರಿ, ಬಸವರಾಜ್ ಮದ್ದರಕಿ, ನಾಗರಾಜ್ ನಾಟಿಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net