ಮರಳು ಗಾಡಿಗಳಿಂದ ಜನರಿಗೆ ತೊಂದರೆ

7mnv02
ಮಾನ್ವಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಶೇಕ್ ಬಾಬಾ ಹುಸೇನ್, ಪುರಸಭೆ ಸದಸ್ಯ ಶೇಖ್ ಫರೀದ್ ಉಮ್ರಿ, ಸಾದಿಕ್ ಹುಸೇನ್ ಕುರೇಶಿ ಇದ್ದರು.
Published on

ಮಾನ್ವಿ: ಜನದಟ್ಟಣೆ ಸ್ಥಳಗಳಲ್ಲಿ ಮರಳು ತುಂಬಿದ ವಾಹನಗಳ ಸಂಚಾರ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಘಟಕ ಗುರುವಾರ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಿತು.

ಅನ್ನಮಯ್ಯ ತಾತ ರಸ್ತೆ, ಟಿಪ್ಪು ಸುಲ್ತಾನ್ ವೃತ್ತ, ಜುಮ್ಮಲದೊಡ್ಡಿ ಸೇರಿ ಇತರ ಜನವಸತಿ ಪ್ರದೇಶಗಳಲ್ಲಿ ನಿತ್ಯ ತುಂಗಭದ್ರಾ ನದಿಯಿಂದ ಮರಳು ತುಂಬಿದ ವಾಹನಗಳ ಸಂಚಾರದಿಂದ ಜನರಿಗೆ ತೊಂದರೆಯಾಗುತ್ತಿದೆ. ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ,

ತಾಲೂಕು ಆಡಳಿತ ಮರಳು ಲಾರಿಗಳು ಜನವಸತಿ ಇರುವ ಪಟ್ಟಣದೊಳಗಿನ ರಸ್ತೆಗಳಲ್ಲಿ ಸಂಚರಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಶೇಕ್ ಬಾಬಾ ಹುಸೇನ್, ಪುರಸಭೆ ಸದಸ್ಯ ಶೇಖ್ ಫರೀದ್ ಉಮ್ರಿ, ಪ್ರಮುಖರಾದ ಸಾದಿಕ್ ಹುಸೇನ್ ಕುರೇಶಿ, ನಾವೇದ್ ನಾಯಿಕ್, ಎಂ.ಎ.ಎಚ್.ಮುಖಿಮ್, ಲತೀಫ್ ನಾಯಿಕ್, ನಾಸೀರ್ ಅಲಿ, ಶೇಖ್ ಮೆಹಬೂಬ್ ಸಾಬ್, ಇಮ್ತಿಯಾಜ್ ಹುಸೇನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net