ಸನಾತನ ಧರ್ಮ ಟೀಕಿಸುವವರು ಕ್ಯಾನ್ಸರ್ ಇದ್ದಂತೆ: ಆಂದೋಲಾ ಸ್ವಾಮೀಜಿಯವರ ತಿರುಗೇಟು

Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸನಾತನ ಧರ್ಮದ ಬಗ್ಗೆ ಲಘುವಾಗಿ ಮಾತನಾಡುವರು, ಟೀಕಿಸುವವರು ಕ್ಯಾನ್ಸರ್ ಇದ್ದಂತೆ ಎಂದು ಶ್ರೀರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಆಂದೋಲಾದ ಸಿದ್ದಲಿಂಗ ಮಹಾಸ್ವಾಮೀಜಿ ತಿರುಗೇಟು ನೀಡಿದರು.
ತಮಿಳು ನಾಡಿನ ಮಂತ್ರಿ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಡೆಂಘೆ, ಮಲೇರಿಯಾ ಇದ್ದಂತೆ ಹೇಳಿರುವುದಕ್ಕೆ ತೀವ್ರ ಆಕ್ದೇಪ ವ್ಯಕ್ತಪಡಿಸಿದರು. ಅಲ್ಲದೆ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ನಿಮಗೇನಾದರೂ ಸನಾತನ ಧರ್ಮದಿಂದ ಡೆಂಘೆ ಬಂದಿತ್ತೇನು ?, ಮಲೇರಿಯಾ ಬಂದಿತ್ತೇನು ಎಂದು ಪತ್ರಕರ್ತರ ಜತೆಗೆ ಮಾತನಾಡಿ, ಖಾರವಾಗಿ ಪ್ರಶ್ನಿಸಿದರು.
ಡೆಂಘೆ, ಮಲೇರಿಯಾದ ಆದರೆ ಔಷಧ ನೀಡಿದರೆ ಕಡಿಮೆಯಾಗುತ್ತದೆ. ಆದರೆ, ಕ್ಯಾನ್ಸರ್ ಹಾಗಲ್ಲ. ಆ ಭಾಗವನ್ನು ಆಪರೇಷನ್ ಮಾಡಿಯೇ ತೆಗೆಯಬೇಕಾಗುತ್ತದೆ ಎಂಬುದು ಅವರಿಗೆ ಗೊತ್ತಿಲ್ಲವೆಂದು ಕಾಣುತ್ತದೆ ಎಂದು ವಾಗ್ದಾಳಿ ನಡೆಸಿದರು.  ಅಂತಹ ರೋಗವನ್ನು ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ. ಉದಯನಿಧಿ ಈಗ ಕ್ರೆÊಸ್ತ್ರಾಗಿರಬಹುದು. ಅವರ ಹಿರಿಯರೆಲ್ಲ ಹಿಂದುಗಳೇ ಆಗಿದ್ದರು ಎಂಬುದು ನೆನಪಿಸಿಕೊಳ್ಳಲಿ ಎಂದು ತಿವಿದರು.
ಹಿಂದೆ ಅವರ ತಾತಾ ಕರುಣಾನಿಧಿ ಅವರು ರಾಮನ ಬಗ್ಗೆ ಇಲ್ಲದ್ದನ್ನು ಮಾತನಾಡಿದ್ದರು. ಈಗ ಇತ ಮಾತನಾಡುತ್ತಿದ್ದು, ಹಿಂದು, ಸನಾತನ ಧರ್ಮದ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ. ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಆಂದೋಲಾ ಶ್ರೀಗಳು ಎಚ್ಚರಿಕೆ ನೀಡಿದರು.
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆ ಹೇಳುತ್ತಲೇ ಅವರ ತಾತ ಹೋಗಿ ಬಿಟ್ಟರು. ತಲೆ ತಲಾಂತರದಿAದ ಈ ಧರ್ಮ ಇದೆ ಎಂಬುದು ಅರಿತುಕೊಳ್ಳಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net