

ಕಲಬುರಗಿ : ನಗರದಲ್ಲಿ ಇಂದು ಸಂವಿಧಾನ ಜಾಗೃತಿ ಜಾಥಾ ಮಾದರಿಯಾಗಿ ಜರುಗಿತು. ಸಂವಿಧಾನದ ಆಶಯವನ್ನು ಜಾರಿ ಮಾಡಲು ಎಲ್ಲರೂ ಶ್ರಮಿಸಲು ಡಿಸಿ ಫೌಜಿಯಾ ತರನ್ನುಮ್ ತಿಳಿಸಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾವನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.ಜಿಲ್ಲಾ ಪಂಚಾಯತ್ ಸಿಇಓ ಭಂವರಸಿಂಗ್ ಮೀನಾ,ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಎಡಿಸಿ ರಾಯಪ್ಪ ಹುಣಸಗಿ.ಜಮಾಜ ಕಲ್ಯಾಣ ಇಲಾಖೆಯ ಜೆಡಿ ಪಿ.ಶುಭ, ಪ್ರಾಚಾರ್ಯ ರಾಜಶೇಖರ ಮಾಂಗ್ ಇದ್ದರು.