ಮಾತೃಭಾಷಾ ಶಿಕ್ಷಣದೊಂದಿಗೆ ಆಂಗ್ಲಭಾಷಾ ಕಲಿಕೆ: ಡಾ.ಪಾರ್ವತಿ ಜಿ.ಐತಾಳ್ ಅಭಿಮತ

New Project (8)
Published on

ಬದಿಯಡ್ಕ: ಮಾತೃಭಾಷಾ ಶಿಕ್ಷಣದ ಜತೆಗೆ ಆಂಗ್ಲಭಾಷಾ ಕಲಿಕೆ ಸಾಗಿದರೆ ನ್ಯಾಯ ಸಲ್ಲುತ್ತದೆ. ಮಾತೃಭಾಷೆ ಮರೆತು ಸಾಗುವ ನಮ್ಮ ನಡೆ ತಪ್ಪಾಗಿ ಸಂಸ್ಕೃತಿಯಿಂದ ಹೊರಗುಳಿಯಲು ಕಾರಣವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಪಾರ್ವತಿ ಜಿ.ಐತಾಳ್ ಹೇಳಿದರು.

ಬದಿಯಡ್ಕ ಸಮತಾ ಸಾಹಿತ್ಯ ವೇದಿಕೆ ನೀರ್ಚಾಲು ಬನವಾಸಿ ಮನೆ ಪರಿಸರದಲ್ಲಿ ಸೋಮವಾರ ಮುಸ್ಸಂಜೆ ಏರ್ಪಡಿಸಿದ್ದ ಪ್ರಾಥಮಿಕ ಶಿಕ್ಷಣ, ಮಗು ಅರಳುವ ಭಾಷೆ ಶೀರ್ಷಿಕೆಯ ಸೌಹಾರ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಮೋಹನ ಕುಂಟಾರ್ ಅಧ್ಯಕ್ಷತೆ ವಹಿಸಿದ್ದರು. ನಯನಾ ಗಿರೀಶ್ ಅಡೂರು ಸೌಹಾರ್ದ ಸಂವಾದಕ್ಕೆ ಚಾಲನೆ ನೀಡಿದರು. 20 ಮಂದಿ ವಿಷಯ ಪ್ರಸ್ತುತಪಡಿಸಿದರು. ಕಾಸರಗೋಡಿನ ಕನ್ನಡ, ತುಳು ಅಸ್ಮಿತೆಗಳ ಆಧಾರಗಳಾದ ಸ್ಥಳನಾಮ ಪಲ್ಲಟ ಪ್ರಕ್ರಿಯೆ ಕುರಿತು ಚರ್ಚೆ ನಡೆಯಿತು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಸಮತಾ ಸಾಹಿತ್ಯ ವೇದಿಕೆ ಸುಂದರ ಬಾರಡ್ಕ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಶುಭಹಾರೈಸಿದರು. ಪ್ರಾಧ್ಯಾಪಕ ಬನವಾಸಿಯ ನಿರ್ಮಾತೃ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ತಿಕ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net