ಮಾನವೀಯತೆ ಮೆರೆದ ಸಮೃದ್ಧಿ ಟ್ರಸ್ಟ್​

Samruddhi_Trust
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆ ಹೋಬಳಿ ದೊಡ್ಡರಾಂಪುರದಲ್ಲಿ ಸರ್ಕಾರದ ಸೌಲಭ್ಯವಿಲ್ಲದೆ ಅಸಹಾಯಕವಾಗಿರುವ ಬಡ ಕುಟುಂಬಕ್ಕೆ ತುಮಕೂರಿನ ಸಮೃದ್ಧಿ ಶಿಕ್ಷಣ ಟ್ರಸ್ಟ್​ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ.

ಟ್ರಸ್ಟ್​ ಅಧ್ಯಕ್ಷ ಬೆಳಗುಂಬ ವೆಂಕಟೇಶ್​ ಮತ್ತು ತಂಡ ಗುರುವಾರ ದೊಡ್ಡರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಅಸಹಾಯಕ ಕುಟುಂಬಕ್ಕೆ ಅಗತ್ಯವಾದ ದಿನಸಿ, ಅಡುಗೆ ಎಣ್ಣೆ, ತರಕಾರಿ, ಪಾತ್ರೆ, ಬೆಡ್​ ಶೀಟ್​, ಬಟ್ಟೆ ಹಾಗೂ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ನೋಟ್​ ಬುಕ್​, ಟ್ರಕ್​ ವಿತರಿಸಿ ನೆರವಾದರು.

ಊಟ, ಬಟ್ಟೆಯಿಲ್ಲದೆ, ಸೋರುತ್ತಿದ್ದ ಮನೆಯಲ್ಲಿ ವಾಸಿಸುತ್ತಿದ್ದ ಬುದ್ಧಿಮಾಂದ್ಯ, ಅಂಗವಿಕಲರೇ ಇರುವ ಈ ಕುಟುಂಬದ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ತಿಳಿದು ಆ ಕುಟುಂಬಕ್ಕೆ ಬೇಕಾದ ಸೌಲಭ್ಯ ಒದಗಿಸುವ ಮೂಲಕ ಮಾನವೀಯ ಕಾರ್ಯ ಮಾಡಿದ್ದರು, ಈ ಮಾಹಿತಿ ತಿಳಿದ ಸಮೃದ್ಧಿ ಶಿಕ್ಷಣ ಟ್ರಸ್ಟ್​ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್​ ಮತ್ತು ಅವರ ತಂಡ ನೆರವಿಗೆ ಧಾವಿಸಿದೆ. ಟ್ರಸ್ಟ್​ ಅಧ್ಯಕ್ಷ ಬೆಳಗುಂಬ ವೆಂಕಟೇಶ್​ ಮಾತನಾಡಿ, ನಮ್ಮ ಸಮೃದ್ಧಿ ಶಿಕ್ಷಣ ಟ್ರಸ್ಟ್​ ಬಡ ಕುಟುಂಬಗಳಿಗೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಕಾರ್ಯ ಮಾಡುತ್ತಾ ಬಂದಿದೆ, ದೊಡ್ಡರಾಂಪುರದ ಬಡ ಕುಟುಂಬದ ಶೋಚನೀಯ ಸ್ಥಿತಿ ತಿಳಿದು ಅಗತ್ಯ ಆಹಾರ ಸಾಮಗ್ರಿ, ಬಟ್ಟೆ, ಆ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದ್ದೇವೆ, ಮುಂದೆಯು ಈ ಕುಟುಂಬದ ಜೊತೆ ಟ್ರಸ್ಟ್​ ಇರಲಿದೆ ಎಂದರು.

ಟ್ರಸ್ಟ್​ ವತಿಯಿಂದ ಕಾನೂನು ಶಿಕ್ಷಣ ಪಡೆಯುವ ಐದು ಅನಾಥ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೆರವು ನೀಡಲಾಗುತ್ತೆ, ಜಿಲ್ಲೆಯ ತೀರ ಕಡುಬಡತನದ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಯೋಜನೆ ಹೊಂದಿದೆ ಎಂದರು.

ಸಮೃದ್ಧಿ ಶಿಕ್ಷಣ ಟ್ರಸ್ಟ್​ ಕಾರ್ಯದರ್ಶಿ ನಾಗರಾಜು ಬುಗುಡನಹಳ್ಳಿ. ಟ್ರಸ್ಟಿಗಳಾದ ನರಸಿಂಹರಾಜು ವಡ್ಡರಹಳ್ಳಿ. ನಾಗರಾಜು ನಂದಿಹಳ್ಳಿ, ಡಿಕೆ ಕಾಂತರಾಜು ದೊಡ್ಡೇರಿ, ಕುಮಾರ ಹೆಬ್ಬಾಕ, ಹರೀಶ್​ ಬೈರಸಂದ್ರ, ಸುನಿಲ್​ ತೊಂಡಗೆರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net