ದುಬಾರಿ ಯುಗದಲ್ಲಿ ಕೈಗೆಟುಕದ ಶಿಕ್ಷಣ

Samruddhi_trust
Published on

ತುಮಕೂರು: ಇಂದಿನ ದುಬಾರಿ ಯುಗದಲ್ಲಿ ಶಿಕ್ಷಣ ಪಡೆಯುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವರ್ಗದ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು, ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಗೌರವಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಉದಯವಾಗುತ್ತಿರುವ ಸಮೃದ್ಧಿ ಶಿಕ್ಷಣ ಟ್ರಸ್ಟ್​ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಗೌಡಗೆರೆ ಮಠದ ಡಾ.ಮಲ್ಲೆಶ್​ ಸ್ವಾಮೀಜಿ ಆಶಿಸಿದರು.

ನಗರದ ಚಿಕ್ಕಪೇಟೆಯಲ್ಲಿ ಸೋಮವಾರ ಸಮೃದ್ಧಿ ಶಿಕ್ಷಣ ಟ್ರಸ್ಟ್​ ಉದ್ಘಾಟಿಸಿ ಮಾತನಾಡಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯೆನಿಸಿದೆ. ಆರ್ಥಿಕ ಸಂಕಷ್ಟ ಹೊಂದಿರುವ ಕುಟುಂಬಗಳು ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗದ ಸ್ಥಿತಿ ಇದೆ, ಇಂಥ ಬಡ ಕುಟುಂಬಗಳ ಮಕ್ಕಳ ಶಿಕ್ಷಣ ಕ್ಕೆ ನೆರವಾಗುವ ಕೆಲಸಕ್ಕೆ ಮುಂದಾಗಿರುವ ಸಮೃದ್ಧಿ ಶಿಕ್ಷಣ ಟ್ರಸ್ಟ್​ನ ಚಿಂತನೆ ಉತ್ತಮವಾಗಿದೆ ಎಂದರು.

ಟ್ರಸ್ಟ್​ನ ಅಧ್ಯಕ್ಷ ಬೆಂಳಗುಂಬ ವೆಂಕಟೇಶ್​ ಮಾತನಾಡಿ, ಸಾಮಾಜಿಕ ಕಾರ್ಯ ಮಾಡುವ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಈ ಸಮೃದ್ಧಿ ಶಿಕ್ಷಣ ಟ್ರಸ್ಟ್​ ಆರಂಭಿಸಲಾಗಿದೆ, ಬಡ ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಆರ್ಥಿಕ ನೆರವು, ನೋಟ್​ ಬುಕ್​ ಸೇರಿದಂತೆ ಅಗತ್ಯ ಪರಿಕರ ವಿತರಿಸುವ ಜತೆಗೆ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಟ್ರಸ್ಟ್​ನ ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷ ನಂಜುಂಡಯ್ಯ, ಖಜಾಂಚಿ ನಾಗರಾಜು, ಟ್ರಸ್ಟಿಗಳಾದ ಹರೀಶ್​, ಸುನೀಲ್​, ನಾಗರಾಜು, ಕುಮಾರ್, ನರಸಿಂಹರಾಜು ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net