

ತುಮಕೂರು: ತುರುವೇಕೆರೆ ತಾಲೂಕು ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಯಶವಂತಪುರ-&ಚಿಕ್ಕಮಗಳೂರು ಎಕ್ಸ್ಪ್ರೆಸ್ ಹೆಚ್ಚುವರಿ ರೈಲು ನಿಲುಗಡೆಗೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.
ನವೆಂಬರ್ 15ರಿಂದ 2025ರ ಫೆಬ್ರವರಿ 15ರ ವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 16240 ಯಶವಂತಪುರ-&ಚಿಕ್ಕಮಗಳೂರು ಎಕ್ಸ್ಪ್ರೆಸ್ ಸಂಜೆ 5.04ಕ್ಕೆ ಸಂಪಿಗೆ ರೋಡ್ ನಿಲ್ದಾಣ ಆಗಮಿಸಿ ಸಂಜೆ 5.05ಕ್ಕೆ ನಿರ್ಗಮಿಸಲಿದೆ. ನ.16 ರಿಂದ ಫೆಬ್ರವರಿ 15, 2025ರ ವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಎಕ್ಸ್ಪ್ರೆಸ್ ಬೆಳಗ್ಗೆ 11.13ಕ್ಕೆ ಸಂಪಿಗೆ ರೋಡ್ ನಿಲ್ದಾಣ ತಲುಪಿ ಬೆಳಗ್ಗೆ 11.14ಕ್ಕೆ ಬೆಂಗಳೂರಿನತ್ತ ಹೊರಡಲಿದೆ.