4 ಗಂಟೆಗಳಲ್ಲಿ 100 ಪುಸ್ತಕಗಳನ್ನುವಿಮರ್ಶಿಸಿ ಸಮರಾ ವಿಶ್ವದಾಖಲೆ

kkp
Published on

ಕನಕಪುರ: ನಗರದ ಎಡಿಫೈ ಶಾಲೆ 5ನೇ ತರಗತಿ ವಿದ್ಯಾರ್ಥಿನಿ, ಬೂದಿಕೆರೆಯ ಸಮರಾ ಯುಮನ್​ ಬಾಷಾ ಕೇವಲ 4 ಗಂಟೆಗಳಲ್ಲಿ 100 ಪುಸ್ತಕಗಳನ್ನು ವಿಮರ್ಶಿಸಿ ವಿಶ್ವ ದಾಖಲೆ ಬರೆದಿದ್ದಾರೆ.

ಅಸಾಧಾರಣ ಸಾಧನೆಗೆ ಪುಸ್ತಕಗಳನ್ನು ಓದಿ, ಪ್ರತಿ ಪುಸ್ತಕದ ಹೆಸರು ಹೇಳುವುದು, ಲೇಖಕ ಮತ್ತು ಪ್ರಕಾಶಕರನ್ನು ಉಲ್ಲೇಖಿಸುವುದು, ಪುಸ್ತಕದ ಸಾರಾಂಶ ನೀಡುವುದಲ್ಲದೇ ಪ್ರತಿ ಪುಸ್ತಕಕ್ಕೆ ರೇಟಿಂಗ್​ ಕೊಟ್ಟು, ವಿವರವಾದ ಪ್ರತಿಕ್ರಿಯೆ ಹಾಗೂ ಶಿಫಾರಸು ಒದಗಿಸಬೇಕು, ಪ್ರತಿಯೊಂದು ಪುಸ್ತಕವು ಯಾವ ವಯಸ್ಸಿನ ಮಕ್ಕಳಿಗೆ ಸೂಕ್ತ ಎಂಬುದನ್ನೂ ಸೂಚಿಸಬೇಕಿದ್ದು, 4 ಗಂಟೆಗಳಲ್ಲಿ 100 ಪುಸ್ತಕಗಳನ್ನು ಈ ಎಲ್ಲ ಮಾನದಂಡಗಳಲ್ಲಿ ವಿಮರ್ಶಿಸಿದ ಬಾಲಕಿ ಸಮರಾ ಎಲೈಟ್​ ವರ್ಲ್ಡ್​ ರೆಕಾರ್ಡ್ಸ್​, ಏಷಿಯನ್​ ಬುಕ್​ ಆಫ್​ ರೆಕಾರ್ಡ್ಸ್​ ಮತ್ತು ಇಂಡಿಯನ್​ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ. ಸಾಧನೆ ಮೂಲಕ, ಸಮರಾ ಪುಸ್ತಕಗಳ ಮೇಲೆ ಇರುವ ಪ್ರೀತಿ ಮಾತ್ರವಲ್ಲದೆ, ಅವರು ಹೊಂದಿರುವ ವಿಶ್ಲೇಷಣಾ ಕೌಶಲ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಓದಿನಲ್ಲಿನ ತೊಡಗುವಿಕೆಯನ್ನೂ ತೋರ್ಪಡಿಸಿದ್ದಾರೆ. ಅಂದಹಾಗೆ ವಿದ್ಯಾರ್ಥಿನಿ ಸಮರಾ ಯುಮನ್​ ಅವರು ಕನಕಪುರ ತಾಲೂಕು ಬೂದಿಕೆರೆಯ ಮಹಮದ್​ ಮುಜಾಹಿದ್​ ಹಾಗೂ ತಾರಿನ್​ ಮುಜಾಹಿದ್​ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net