ಕೋಡಿ ಗ್ರಾಪಂ ಸಮನ್ವಯ ಸಂಜೀವಿನಿ ಗ್ರಾಮ ಒಕ್ಕೂಟದ ವಾರ್ಷಿಕ ಸಭೆ

kodi gram panchayt
ಕೋಡಿ ಗ್ರಾಪಂ ಸಮನ್ವಯ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಸಭೆಯಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು
Published on

ಕೋಟ: ಕೋಡಿ ಗ್ರಾಪಂ ಸಮನ್ವಯ ಸಂಜೀವಿನಿ ಗ್ರಾಮ ಒಕ್ಕೂಟದ ವಾರ್ಷಿಕ ಸಭೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಒಕ್ಕೂಟ ಅಧ್ಯಕ್ಷೆ ದೀಪಾ ಖಾರ್ವಿ ಅಧ್ಯಕ್ಷತೆ ವಹಿಸಿದರು. ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿಡಿಒ ರವೀಂದ್ರ ರಾವ್ ಅವರು ಕೋಡಿ ಗ್ರಾಪಂ ಎಸ್‌ಎಲ್‌ಆರ್‌ಎಂ ಘಟಕದ ಕಾರ್ಯಕರ್ತರನ್ನು ಸನ್ಮಾನಿಸಿದರು. ಸ್ವಾವಲಂಬನಾ ಫಲಾನುಭವಿಗಳಿಗೆ ಚೆಕ್ ಹಾಗೂ ಗಿಡ ವಿತರಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಮೆಂಡನ್, ಪಂಚಾಯಿತಿ ಸದಸ್ಯರಾದ ಕೃಷ್ಣ ಪೂಜಾರಿ ಪಿ., ಸತೀಶ್ ಜಿ.ಕುಂದರ್, ಎನ್‌ಆರ್‌ಎಲ್‌ಎಂ ಏಕವ್ಯಕ್ತಿ ಸಮಾಲೋಚಕ ಪಾಂಡುರಂಗ, ಸಾಸ್ತಾನ ಕೆನರಾ ಬ್ಯಾಂಕ್ ಮ್ಯಾನೇಜರ್ ಪ್ರಜಿನ್, ಸಂಜೀವಿನಿ ಒಕ್ಕೂಟ ಕಾರ್ಯದರ್ಶಿ ಚಿತ್ರಾಕ್ಷಿ, ಗ್ರಾಪಂ ಸಿಬ್ಬಂದಿ ಹಾಗೂ ಸಂಜೀವಿನಿ ಸಂಘದ 120ಕ್ಕೂ ಅಧಿಕ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಎಲ್‌ಸಿಆರ್‌ಪಿ ಆಶಾದೇವಿ ಸ್ವಾಗತಿಸಿ, ಸುಶೀಲಾ ಪ್ರಾರ್ಥಿಸಿದರು. ಡೆಲ್ಫಿನಾ ಸಭೆ ನಡಾವಳಿ ಹಾಗೂ ಜಮಾ ಖರ್ಚುಗಳನ್ನು ಮಂಡಿಸಿದರು. ಅನಿತಾ ಎಂ.ಬಿ.ಕೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net