ಸಮಾನ ನಾಗರೀಕ ಸಂಹಿತೆ ಕೃತಿ ಲೋಕಾರ್ಪಣೆ

Book
Published on

ಬೆಂಗಳೂರು: ನಂಬಿಕೆ, ವಿಶ್ವಾಸ, ಆಚಾರ ಪದ್ಧತಿಗಳ ವ್ಯಾಪ್ತಿಗೆ ಬಂದಿಲ್ಲದ ಸಮಾಜದ ವಿಚಾರಗಳಲ್ಲಿ ಸಮಾನ ನಾಗರೀಕ ಸಂಹಿತೆ ಸಾಧಿಸಲಾಗಿದೆ ಎಂದು ವಕೀಲೆ ಕ್ಷಮಾ ನರಗುಂದ ಅಭಿಪ್ರಾಯಪಟ್ಟರು.

ಸಮನ್ವಿತ ಪ್ರಕಾಶನ ನಗರದ ವಾಡಿಯಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾನ ನಾಗರೀಕ ಸಂಹಿತೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಜೀವನ ಪದ್ಧತಿ ಹಾಗೂ ಶ್ರದ್ಧತೆಯ ವಿಚಾರಗಳಲ್ಲಿ ಬರುವ ಆಸ್ತಿ, ಮದುವೆ&ವಿಚ್ಛೇದನ, ಮಗುವಿನ ವಿಚಾರ, ದತ್ತು ಸ್ವೀಕಾರ ವಿಚಾರಗಳಲ್ಲಿ ಸಮಾನ ನಾಗರೀಕತೆ ಸಾಧಿಸಲು ಈವರೆಗೆ ಸಾಧ್ಯವಾಗಿಲ್ಲ. ಹಿಂದು ಕೋಡ್​ ಜಾರಿಯಾಗುತ್ತಿದ್ದಂತೆ ನಮ್ಮ ಆಚಾರ ವಿಚಾರಗಳನ್ನು ಪಾಲನೆ ಮಾಡಬಾರದು ಎಂಬ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಸಮಾಜದಲ್ಲಿ ಹಿಂದು ಕೋಡ್​ ಜಾರಿಯಾದ ಬಳಿಕ ಸಾಕಷ್ಟು ಉತ್ತಮ ಕೆಲಸಗಳಾಗಿವೆ. ಬದಲಾವಣೆಗೆ ಅವಶ್ಯಕತೆಗಳಿದ್ದಾಗ ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಅವಕಾಶಗಳಿವೆ ಎಂದು ಹೇಳಿದರು.

ಹಿಂದು ಕೋಡ್​ ಜಾರಿಯಿಂದ ಮಹಿಳೆಯರಿಗೂ ಸಮಾನ ಆಸ್ತಿ ಹಕ್ಕು ದೊರೆಯಲು ಸಾಧ್ಯವಾಗಿದೆ. ಸಿಂಗಲ್​ ಮದರ್​ ಅಥವಾ ವಿಚ್ಛೇದಿತ ಮಹಿಳೆ ಒಂದು ಮಗುವನ್ನು ಹಿಂದು ಧರ್ಮದಲ್ಲಿ ದತ್ತು ತೆಗೆದುಕೊಳ್ಳಬಹುದು. ಈ ಅವಕಾಶ ಕ್ರಿಶ್ಚಿಯನ್​ ಹಾಗೂ ಮುಸ್ಲಿಂ ಧರ್ಮದ ಮಹಿಳೆಯರಿಗೆ ಇಲ್ಲ. ಈ ನಿಟ್ಟಿನಲ್ಲಿ ಕೆಲವೊಂದು ಉತ್ತಮ ವಿಚಾರಗಳಿಗಾಗಿ ಸಮಾನ ನಾಗರೀಕ ಸಂಹಿತೆ ಜಾರಿಯಾಗುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಸಂಪಾದಕರಾದ ಪ್ರೊ.ಎಂ.ಎಸ್​. ಚೈತ್ರ, ಪ್ರೊ. ಎ.ಷಣ್ಮುಖ, ಪ್ರೊ. ರಾಜರಾಮ ಹೆಗಡೆ, ಪ್ರೊ.ಜೆ. ಎಸ್​.ಸದಾನಂದ, ಶ್ರೇಯಾಂಕ ರಾನಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net