ಸಾಲಿಗ್ರಾಮ ಪಪಂಗೆ ಸುಕನ್ಯಾ ಶೆಟ್ಟಿ ಅಧ್ಯಕ್ಷೆ

saligrama
ಸಾಲಿಗ್ರಾಮ ಪಪಂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಗಿರಿಜಾ ಪೂಜಾರಿ ಆಯ್ಕೆ.
Published on

ಕೋಟ: ಸಾಲಿಗ್ರಾಮ ಪಪಂ ಎರಡನೇ ಅವಧಿಯ ಅಧಿಕಾರಾವಧಿ ಆಯ್ಕೆ ಪ್ರಕ್ರಿಯೆ ಮಂಗಳವಾರ ಸಾಲಿಗ್ರಾಮ ಪಪಂ ಸಭಾಂಗಣದಲ್ಲಿ ನಡೆಯಿತು.
ಚುನಾವಣಾಧಿಕಾರಿಯಾಗಿ ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆದವು.

ಎರಡನೇ ಅವಧಿ ಅಧ್ಯಕ್ಷರಾಗಿ ಬಿಜೆಪಿಯ ಮಾರಿಗುಡಿ ವಾರ್ಡ್ ಸದಸ್ಯೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷರಾಗಿ ಬಿಜೆಪಿಯ ಕಾರ್ಕಡ ತೆಂಕುಹೋಳಿ ವಾರ್ಡ್‌ನ ಗಿರಿಜಾ ಪೂಜಾರಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಗಿರಿಜಾ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಝಹಿರಾ ನಾಮಪತ್ರ ಸಲ್ಲಿಸಿದ್ದರು.

16 ಮಂದಿ ಸಂಖ್ಯಾಬಲದ ಸಾಲಿಗ್ರಾಮ ಪಪಂ ನಲ್ಲಿ ಬಿಜೆಪಿಯ 10, ಕಾಂಗ್ರೆಸ್‌ನ 5, ಪಕ್ಷೇತರ ಓರ್ವ ಸದಸ್ಯರಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಶಾಸಕ ಕಿರಣ್ ಕೊಡ್ಗಿ ಮತದೊಂದಿಗೆ 11, ಕಾಂಗ್ರೆಸ್‌ನ ಬೆಂಬಲಿತರು 5 ಮತಗಳನ್ನು ಪಡೆದರು. ಪಕ್ಷೇತರ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ತಟಸ್ಥ ನಿಲುವು ತಳೆದಿದ್ದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮುಖ್ಯಾಧಿಕಾರಿ ಶಿವ ನಾಯ್ಕ ಉಪಸ್ಥಿತರಿದ್ದರು.

ಕಾಂಗ್ರೆಸ್‌ನಲ್ಲಿ ಐದೇ ಮಂದಿ ಸದಸ್ಯರಿದ್ದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆ ಎನ್ನುವಂತದ್ದು ಇರಬೇಕು. ಅವಿರೋಧ ಸರಿಯಲ್ಲ ಎನ್ನುವ ನೆಲೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಪಕ್ಷದಿಂದ ನಾಮಪತ್ರ ಸಲ್ಲಿಸಿದರು. -ಶ್ರೀನಿವಾಸ್ ಅಮೀನ್, ಪಪಂನ ಕಾಂಗ್ರೆಸ್ ವಿಪಕ್ಷ ನಾಯಕ

-ಶ್ರೀನಿವಾಸ್ ಅಮೀನ್, ಪಪಂನ ಕಾಂಗ್ರೆಸ್ ವಿಪಕ್ಷ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net