ಸುಜ್ಞಾನದ ಬೆಳಕು ಮೂಡಿಸಿದ ಸಂತ ಸೇವಾಲಾಲ್​ರು

15 lxr 6- BANJARA
Published on

ಲಕ್ಷ್ಮೇಶ್ವರ: ಸಂತ ಸೇವಾಲಾಲ್ ಮಹಾರಾಜರು ಸಮಾಜದ ಜನರಲ್ಲಿನ ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ಸುಜ್ಞಾನದ ಬೆಳಕು ಮೂಡಿಸಿದ್ದಾರೆ ಎಂದು ತಹಸೀಲ್ದಾರ್ ಾಸುದೇವ ಸ್ವಾಮಿ ಹೇಳಿದರು.
ಗುರುವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವೇಳೆ ಬಂಜಾರ ಕಲ್ಯಾಣ ಸಂಘದ ತಾಲೂಕು ಅಧ್ಯಕ್ಷ ದೀಪಕ ಲಮಾಣಿ, ಶೇಖಪ್ಪ ಲಮಾಣಿ, ಸೋಮಪ್ಪ ಲಮಾಣಿ, ಮಹೇಶ ಲಮಾಣಿ, ನಾನಪ್ಪ ಲಮಾಣಿ ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಇದ್ದರು. ಪಟ್ಟಣದ ತಾಪಂ ಕಾರ್ಯಾಲಯ, ಪುರಸಭೆ, ಕೆಇಬಿ, ಡಿಪೋ ಸೇರಿ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net