

ಸುಂಟಿಕೊಪ್ಪ: ಇಲ್ಲಿನ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಬಳ್ಳಾರಿ ಧರ್ಮಕ್ಷೇತ್ರದ ಹಟ್ಟಿ ದೇವಾಲಯದ ಧರ್ಮಗುರು ರೇ.ಫಾ.ವಿಜಯಕುಮಾರ್, ಆರಾಧನೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ವಂ.ಗುರು ರೇ.ಫಾ.ವಿಜಯಕುಮಾರ್, ಆನಂದ್ ಪ್ರಸಾದ್, ಅನಿಲ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶುಕ್ರವಾರ ಸಂಜೆ ಬೆಂಗಳೂರು ಹೋಲಿ ಘೋಸ್ಟ್ ದೇವಾಲಯದ ಧರ್ಮಗರು ಸಿಲುವೈ ಮುತ್ತು ವಿಶೇಷ ಪೂಜೆ ಪ್ರಭೋದನೆ ನೀಡಿದರು.
3ರಂದು ಸಂಜೆ 5.30ಕ್ಕೆ ಮೈಸೂರಿನ ಪುಷ್ಪಗಿರಿ ಬಾಲಯೇಸುವಿನ ದೇವಾಲಯದ ಧರ್ಮಗುರು ಮರಿಯ ಕ್ಷೇವಿಯರ್ ಹಾಗೂ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ಜೆರಾಲ್ಡ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ಆಡಂಬರ ದಿವ್ಯ ಬಲಿಪೂಜೆ ಪ್ರಭೋದನೆ ಮತ್ತು ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಸಂಸ್ಕಾರ ವಿತರಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನ ಅಂಬು ಕಾಣಿಕೆಯ ಹರಕೆಯನ್ನು ಭಕ್ತರು ಸಲ್ಲಿಸಿದರು. ಭಾನುವಾರ ಸಂಜೆ 5.30ಕ್ಕೆ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ಹಾಗೂ ಭಕ್ತರು ಕನ್ನಡ ವೃತ್ತದಲ್ಲಿ ಮೈಸೂರು ಧರ್ಮಕ್ಷೇತ್ರದ ವಿಶ್ರಾಂತ ಮಹಾ ಧರ್ಮಾಧ್ಯಕ್ಷ ಡಾ.ಬರ್ನಾಡ್ ಮೋರಸ್ ಅವರನ್ನು ಸ್ವಾಗತಿಸಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಕರೆದೊಯ್ದರು. ಡಾ.ಬರ್ನಾಡ್ ಮೋರಸ್ ಹಬ್ಬದ ಅಡಂಬರ ಗಾಯನ ದಿವ್ಯ ಬಲಿಪೂಜೆ ಹಾಗೂ ಮಕ್ಕಳಿಗೆ ಧೃಢೀಕರಣ ಸಂಸ್ಕಾರವನ್ನು ನೇರವೇರಿಸಿದರು.
ಮಡಿಕೇರಿ ವಲಯದ ಶೇಷ್ಠ ಗುರು ಜಾರ್ಜ್ ದೀಪಕ್, ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ವಲಯದ ಶ್ರೇಷ್ಠ ಧರ್ಮ ಗುರು ಜೇಮ್ಸ್ ಡೋಮಿನಿಕ್ ಹಾಗೂ ಇತರ ಧರ್ಮ ಕೇಂದ್ರಗಳಿಂದ ಆಗಮಿಸಿದ್ದ ಧರ್ಮಗುರುಗಳು ಆಡಂಬರ ಬಲಿಪೂಜೆ ನೇರವೇರಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದ ಒಳಾಂಗಣವನ್ನು ಅಲಂಕರಿಸಲಾಗಿತ್ತು. ಬೀಟಿಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆ ಚಾಲ್ಸ್ ನರೋನ, ಪೌಲ್ ಹೇರ್ಸ, 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್), ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ರೇ.ಫಾ.ಮಾರ್ಟಿನ್, ಮಾದಾಪುರ ದೇವಾಲಯದ ರೇ.ಫಾ.ಸೂಸೈರಾಜ್, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ರೇ.ಪಾ.ಅವಿನಾಶ್, ರಾಯಲ್ ಕ್ರಾಸ್ತಾ, ಹ್ಯಾರಿಟೇರಿ, ಪುಷ್ಪಗೀರಿ ಬಾಲ ಯೇಸು ದೇವಾಲಯದ ಮರಿಯನ್ ಕ್ಸೇವಿಯರ್, ರೇ.ಪಾ.ಚಾಲ್ಸ್ ಹಾಗೂ ಸಂತ ಅಂತೋಣಿ ದೇವಾಲಯದ ಫಾಧರ್ ವಿಜಯಕುಮಾರ್ ಇತರರು ಇದ್ದರು.
ಸಂತ ಕ್ಲಾರ ಕನ್ಯಾಸ್ತ್ರಿ ಮಠದ ಕನ್ಯಾಸ್ತ್ರೀಯರು, ಕುಶಾಲನಗರ, ಹೊಸಕೋಟೆ, ಸೋಮವಾರಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಕನ್ಯಾಸ್ತ್ರಿಯರು ದೇವಾಲಯದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಪ್ರತಿಮೆಯನ್ನು ಇರಿಸಿ ಬ್ಯಾಂಡ್‌ಸೆಟ್‌ನೊಂದಿಗೆ ಧರ್ಮಗುರು, ಕ್ರೈಸ್ತ ಸನ್ಯಾಸಿನಿಯರು ಮತ್ತು ಸುಂಟಿಕೊಪ್ಪ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯ ಕ್ರೈಸ್ತರು ಪ್ರಾರ್ಥನೆ ಹಾಗೂ ಭಕ್ತಿ ಗಾಯನಗಳನ್ನು ಹಾಡುತ್ತ ಮೋಂಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು. ನಂತರ ದೇವಾಲಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ಆರ್ಶಿವಚನದೊಂದಿಗೆ ವಾರ್ಷಿಕೋತ್ಸವವು ಸಂಪನ್ನಗೊಂಡಿತು.