ಸೈದಪೂರ ನೂತನ ಕೈಸ್ತ ದೇವಾಲಯ ಉದ್ಘಾಟನೆ

2.ktal.01
ಕವಿತಾಳ ಸಮೀಪದ ಸೈದಪೂರದಲ್ಲಿ ಸಂತ ಜೋಸೆಫರ ದೇವಾಲಯವನ್ನು ಶಾಸಕ ಹಂಪಯ್ಯನಾಯಕ ಉದ್ಘಾಟಿಸಿದರು. ಬಳ್ಳಾರಿ ಧರ್ಮಕ್ಷೇತ್ರದ ಅಧ್ಯಕ್ಷ ಬಿಷಪ್ ಹೆನ್ರಿ ಡಿಸೋಜ, ಹಟ್ಟಿ ಧರ್ಮಕೇಂದ್ರದ ಫಾದರ್ ವಿಜಯಕುಮಾರ, ಕವಿತಾಳ ಧರ್ಮಕೆಂದ್ರದ ಫಾ.ವಿಜಯಕುಮಾರ, ಗಂಟ್ಯಾಳ ಫಾ.ಅನೀಲ್, ಫಾ.ಚಂದ್ರಕಾಂತ, ಸಿಸ್ಟರ್‌ಗಳಾದ ಸೋನೀಯಾ, ಡಿಸೋಜ, ಸುಶೀಲಾ, ಅಲ್ಫೋನ್ಸಾ, ಪ್ರಮುಖರಾದ ಪ್ರಭುರಾಜ ಕೊಡ್ಲಿ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಶಾಂತಮ್ಮ ಇದ್ದರು.
Published on

ಕವಿತಾಳ: ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಯೇಸುವಿನ ಮಾರ್ಗದಲ್ಲಿ ನಡೆಯಬೇಕೆಂದು ಶಾಸಕ ಹಂಪಯ್ಯನಾಯಕ ಹೇಳಿದರು.

ಸಮೀಪದ ಸೈದಪೂರದಲ್ಲಿ ಸಂತ ಜೋಸೆಫರ ದೇವಾಲಯ ಉದ್ಘಾಟನೆಯಲ್ಲಿ ಭಾಗಿಯಾಗಿ ಸೋಮವಾರ ಮಾತನಾಡಿದರು. ಬಲಿ ಪೂಜೆಯನ್ನು ಹಟ್ಟಿ ಧರ್ಮಕೇಂದ್ರದ ಫಾದರ್ ವಿಜಯಕುಮಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭೂದಾನಿಗಳನ್ನು, ಹಿಂದಿನ ಧರ್ಮಗುರುಗಳನ್ನು, ಗುತ್ತೆದಾರ, ಇಂಜಿನಿಯರ್ ಗೌರವಿಸಲಾಯಿತು.

ಗಂಟ್ಯಾಳ ಫಾ.ಅನೀಲ್, ಫಾ.ಚಂದ್ರಕಾಂತ, ಸಿಸ್ಟರ್‌ಗಳಾದ ಸೋನೀಯಾ, ಡಿಸೋಜ, ಸುಶೀಲಾ, ಅಲ್ಫೋನ್ಸಾ, ಪ್ರಮುಖರಾದ ಪ್ರಭುರಾಜ ಕೊಡ್ಲಿ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಶಾಂತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net