ಪೊಳಲಿ ಕ್ಷೇತ್ರಕ್ಕೆ ಸಾಯಿ ಈಶ್ವರ್ ಗುರೂಜಿ ಭೇಟಿ

swamiji
ಶಂಕರಪುರ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಗೀತಾಂಜಲಿ ಸುವರ್ಣ, ಯಶವಂತ ಪೊಳಲಿ ಮೊದಲಾದವರಿದ್ದರು.
Published on: 

ಬಂಟ್ವಾಳ: ಉಡುಪಿ ಜಿಲ್ಲೆಯ ಶಂಕರಪುರ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ. ‘108 ದಿನ 108 ಕ್ಷೇತ್ರ ಪ್ರದಕ್ಷಿಣೆ’ ಕಾರ್ಯಕ್ರಮ ಪ್ರಯುಕ್ತ ಸೋಮವಾರ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ದೇವಳಕ್ಕೆ ಔಷಧೀಯ ಗಿಡ ವಿತರಿಸಿದರು.

ದೇಶದಲ್ಲಿ ಮತಾಂತರಕ್ಕೆ ತಡೆ ಮತ್ತು ಸೈನಿಕರಿಗೆ ಶಕ್ತಿ ನೀಡುವುದಕ್ಕಾಗಿ ಶಂಕರಪುರ ದ್ವಾರಕಾಮಯಿ ಮಠವು, ‘108 ದಿನ 108 ಕ್ಷೇತ್ರ ಪ್ರದಕ್ಷಿಣೆ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಜು.19ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ 38 ಕ್ಷೇತ್ರಗಳ ಪ್ರದಕ್ಷಿಣೆ ನಡೆಸಲಾಗಿದೆ ಎಂದರು.

ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಪ್ರಮುಖರಾದ ಯಶವಂತ ಪೊಳಲಿ, ವೀಣಾ ಶೆಟ್ಟಿ, ಸತೀಶ್, ನಾಗೇಶ ಆದ್ಯಪಾಡಿ, ಭಾಸ್ಕರ ಎಸ್.ಎಡಪದವು ಮತ್ತಿತರರು ಇದ್ದರು.