ಸಂಸ್ಕಾರ ಭಾರತಿಯಿಂದ ವಿವಿಧ ಕ್ಷೇತ್ರಗಳ ಅನನ್ಯ ಸಾಧಕರಿಗೆ ಗುರುವಂದನೆ

mng--24 July samskara Bharathi
Published on

ಮಂಗಳೂರು : ಮಂಗಳೂರು ಸಂಸ್ಕಾರ ಭಾರತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಹಿರಿಯ ಕಲಾವಿದರು, ಕಲಾ ಸಂಘಟಕರು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಲಾಯಿತು.


ಸಂಗೀತ, ಸಾಹಿತ್ಯ ಕ್ಷೇತ್ರದ ಬಿ. ಭೋಜ ಸುವರ್ಣ ಬರ್ಕೆ,ಚಿತ್ರಕಲೆಯಲ್ಲಿ ಅಪೂರ್ವ ಸಾಧನೆಗೈದ ಕೆ. ಚಂದ್ರಯ್ಯ ಆಚಾರ್ಯ, ಸಮಾಜ ಸೇವೆಯಲ್ಲಿ ಅನನ್ಯ ಸೇವೆ ಗೈದ ಪಂಡಿತ್ ರಾಮ ರಾವ್, ನಾಟಿ ವೈದ್ಯೆಯಾಗಿ ಅಪೂರ್ವ ಸಾಧನೆ ಮಾಡಿದ ಗಿರಿಜಾ,
ಯಕ್ಷಗಾನ ಪ್ರಸಾಧನದಲ್ಲಿ ಮಹತ್ತರ ಸಾಧನೆಗೈದಿರುವ ಜಿ.ನಾರಾಯಣ ಹೊಳ್ಳ ಅವರನ್ನು ಅವರ ನಿವಾಸಕ್ಕೆ ತೆರಳಿ 10 ಸಾವಿರ ರೂ. ನಗದಿನ ಸಹಿತ ಪುರಸ್ಕಾರದೊಂದಿಗೆ ಗುರುನಮನ ಸಲ್ಲಿಸಲಾಯಿತು.


ವಿಶೇಷವಾಗಿ ನಾಟ್ಯಾರಾಧನಾ ಕಲಾ ಕೇಂದ್ರದ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ಮನೆಯಲ್ಲಿ ಅವರ ಪೂಜ್ಯ ತಂದೆ ಪಂಡಿತ್ ರಾಮ ರಾವ್ ಇವರ ಅಭಿನಂದನಾ ಸಂದರ್ಭದಲ್ಲಿ ಗುರು ಪೂರ್ಣಿಮೆಯ ಪ್ರಯುಕ್ತ ವಿಶೇಷವಾಗಿ ನಟರಾಜನ ಪೂಜೆಯೊಂದಿಗೆ ಆರಂಭಿಸಲಾಯಿತು.


ಸಂಸ್ಕಾರ ಭಾರತೀಯ ಪ್ರಾಂತ ಉಪಾಧ್ಯಕ್ಷರಾದ ಚಂದ್ರಶೇಖರ್ ಕೆ. ಶೆಟ್ಟಿ, ಪ್ರಾಂತ ಕೋಶಾಧಿಕಾರಿ ರಘುವೀರ್ ಗಟ್ಟಿ, ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಮಂಗಳೂರು ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಕೆ. ಭಂಡಾರಿ ಉಪಾಧ್ಯಕ್ಷ ಧನಪಾಲ್ ಎಚ್. ಶೆಟ್ಟಿಗಾರ್, ಕಾರ್ಯದರ್ಶಿ ಗಣೇಶ ಬೋಳೂರು, ಸಹ ಕಾರ್ಯದರ್ಶಿ ಹರ್ಷಿತ ಕೊಟ್ಟಾರಿ, ಜಾನಪದ ವಿದ್ವಾಂಸರೂ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್‌ಸಾರ್, ವಿಭಾಗ ಸಂಚಾಲಕರಾದ ಮಾಧವ ಭಂಡಾರಿ, ತುಳು ಲಿಪಿ ಶಿಕ್ಷಕಿ ಮತ್ತು ಸಾಹಿತಿ ಗೀತಾ ಲಕ್ಷ್ಮೀಶ್, ನೃತ್ಯ ವಿಧಾ ಪ್ರಮುಖ್ ವಿದುಷಿ ಶ್ರೀಲತಾ ನಾಗರಾಜ್, ಮಂಗಳೂರು ಸಮಿತಿಯ ಕೋಶಾಧಿಕಾರಿ ಚಂದ್ರಪ್ರಭಾ ಕುಲಾಲ್, ಸಂಗೀತ ವಿಧಾ ಪ್ರಮುಖ್ ಡಾ. ಪ್ರತಿಭಾ ರೈ, ಕಾರ್ಯಕರ್ತರಾದ ಚಂದ್ರಕಾಂತ್, ವೈಭವ ಶೆಟ್ಟಿಗಾರ್, ಕೀರ್ತಿಪ್ರಸಾದ್ ಕೈಯ್ಯ, ಹರಿಪ್ರಸಾದ್ ರೈ, ಗಣೇಶ ಆಚಾರ್ಯ, ಶ್ರೀಪತಿ ಆಚಾರ್ಯ, ಮ. ಯೋಗೀಶ್, ರತ್ನಾವತಿ ಜೆ. ಬೈಕಾಡಿ, ಜಯಲಕ್ಷ್ಮೀ ಬಾಲಕೃಷ್ಣ, ರಾಜೇಶ್ವರಿ, ಜಯಶ್ರೀ ಶೆಟ್ಟಿ, ಪ್ರವೀಣ್ ಬಸ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net