ಚನ್ನಪಟ್ಟಣ: ತಾಲೂಕಿನ ಪ್ರತಿಭೆ ಅಬ್ಬೂರು ಪ್ರಕಾಶ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಕಾಡೆಮಿಯಲ್ಲಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿ ಬಹುಮಾನಗಳನ್ನು ಅಕಾಡೆಮಿ ಅಧ್ಯ ಎನ್.ಎಲ್.ಮಂಕುಂದರಾಜ್ ೂಷಿಸಿದ್ದು, ಅದರಂತೆ 2023ನೇ ಸಾಲಿನ ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿ ಬಹುಮಾನ)ಕ್ಕೆ ಅಬ್ಬೂರು ಪ್ರಕಾಶ ಅವರ "ಕಣ್ವ ಕನ್ನಡಿಯಲ್ಲಿ' ಪುಸ್ತಕ ಆಯ್ಕೆಗೊಂಡಿದೆ.
ತಾಲೂಕಿನ ಅಬ್ಬೂರಿನವರಾದ ಪ್ರಕಾಶ ಅವರು, ಪ್ರಾಥಮಿಕ ಶಿಣವನ್ನು ಅಬ್ಬೂರಿನಲ್ಲಿ, ಮಾಧ್ಯಮಿಕವನ್ನು ದಶವಾರ ಹಾಗೂ ಪ್ರೌಢಶಿಣವನ್ನು ನಾಗವಾರದ ಪ್ರೌಢಶಾಲೆ, ಕಾಲೇಜು ಶಿಣವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪೂರೈಸಿ, ಬೆಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೆಲಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿರುವ ಇವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ, ಜಂಟಿ ನಿರ್ದೇಶಕರಾಗಿ ನಿವೃತ್ತಿಗೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪತ್ನಿ ಸುಧಾ ಹಾಗೂ ಪುತ್ರ ಸೂರ್ಯ ಜತೆಗೆ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ.
5 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದ ಎಚ್ಡಿಕೆಕಣ್ಣ ಕನ್ನಡಿಯಲ್ಲಿ ಅಬ್ಬೂರಿನ ಚಿತ್ರಗಳು ಇವರ ಮೊದಲ ಪುಸ್ತಕವಾಗಿದ್ದು, ಚೊಚ್ಚಲ ಪುಸ್ತಕವೇ ದತ್ತಿ ಬಹುಮಾನಕ್ಕೆ ಆಯ್ಕೆಯಾಗಿರುವುದು ವಿಶೇಷ. ವೃತ್ತಿಯ ಜತೆಜತೆ ಮೊದಲಿನಿಂದಲೂ ಪ್ರಕಾಶ ಅವರು ಸಾಹಿತ್ಯಾಸಕ್ತರಾಗಿದ್ದು , ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಈ ಹಿಂದೆ ಇವರು ಜಾಲತಾಣದಲ್ಲಿ ಹಂಚಿಕೊಂಡಿದ್ದ ಅಬ್ಬೂರು ಅಣೆಕಟ್ಟು ಸ್ಥಿತಿಗತಿಯ ಬಗೆಗಿನ ಬರಹವು ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಮನಸೆಳೆದ ಕಾರಣ, ಅಣೆಕಟ್ಟು ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದನ್ನು ಸ್ಮರಿಸಬಹುದು. ಕಣ್ವ ಕನ್ನಡಿ ಪುಸ್ತಕದ ಜತೆಗೆ ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ, ಮಕ್ಕಳ ಕಥೆಗಳನ್ನೂ ಅನುವಾದಿಸಿದ್ದಾರೆ.ವಿಶೇಷ ಪುಸ್ತಕಸ್ವಗ್ರಾಮವಾದ ಅಬ್ಬೂರಿನ ಚಿತ್ರಗಳು ಎಂಬ ಒಕ್ಕಣೆಯೊಂದಿಗೆ ಆರಂಭವಾಗಿದ್ದ ಪ್ರಕಾಶ ಅವರ ಕಣ್ವ ಕನ್ನಡಿ ಪುಸ್ತಕ, ಒಂದು ಗ್ರಾಮದ ವರದಿಯಾಗದೇ, ಗ್ರಾಮೀಣ ಸೊಬಗಿನ ಚಿತ್ರಣ ಹಾಗೂ ಸೊಗಡನ್ನು ಸರಳವಾಗಿ ನಿರೂಪಿಸುವ ಕಥನಶೈಲಿ ಓದುಗರಿಗೆ ಮುದಕೊಟ್ಟಿತ್ತು. ಜಾತಿ ಪದ್ಧತಿ, ಮರೆಯಾಗುವ ಬೇಸಾಯದ ಜಮೀನು, ಕೆರೆ ನುಂಗುವವರು, ಸಂತೆ ಮಠ, ದೇಗುಲ ಜಾತ್ರೆ ಇವೆಲ್ಲವೂ ಓದುಗರ ಕಣ್ಮುಂದೆ ತರುವ ನಿರೂಪಣೆ ಪುಸ್ತಕದಲ್ಲಿದೆ.