

ಉಪ್ಪಿನಂಗಡಿ: ಕಾಪು ಪರಿಸರದ ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ ಹಾಗೂ ಆಶ್ರಯ ಕಲ್ಪಿಸಿದ್ದ ಆರೋಪದಡಿ ಉಪ್ಪಿನಂಗಡಿ ಸಮೀಪದ ಕರುವೇಲು ಬಾನೊಟ್ಟು ನಿವಾಸಿ ಸಫೀರ ಯಾನೆ ಸಾಜಿದಾ(21) ಎಂಬಾಕೆಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಪರಿಸರದಲ್ಲಿ ಇತ್ತೀಚೆಗೆ ನಡೆದ ತಲವಾರು ಕಾಳಗದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ವಿಚಾರಣೆ ವೇಳೆ ಆರೋಪಿಗಳಿಗೆ ಆರ್ಥಿಕ ನೆರವು, ಆಶ್ರಯ, ಮೊಬೈಲ್ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಕೃತ್ಯಗಳಿಗೆ ನೆರವಾಗಿದ್ದಾಳೆಂಬ ಆರೋಪದನ್ವಯ ಉಡುಪಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಸಫೀರಾ ಪತಿ ವಿದೇಶದಲ್ಲಿದ್ದಾರೆ. ಈಕೆಯ ಕಾರಣಕ್ಕಾಗಿ ಕೆಲಸಮಯಗಳ ಹಿಂದೆ ಇದೇ ಗರುಡ ಗ್ಯಾಂಗ್ ಸದಸ್ಯರು, ಕರುವೇಲು ಎಂಬಲ್ಲಿ ಹಕೀಂ ಎಂಬುವರ ಮೇಲೆ ತಲವಾರಿನಿಂದ ಕಡಿದು ಹಲ್ಲೆ ನಡೆಸಿದ್ದರು.