ಸರಿಯಿದ್ದ ರಸ್ತೆ ಅಗೆದು ಹಾಕಿ ಸಮಸ್ಯೆ : ಅನುಮತಿಯಿಲ್ಲದೆ ಖಾಸಗಿಯವರು ಮಾಡಿದ ಕೆಲಸ : ತಹಸೀಲ್ದಾರ್‌ಗೆ ದೂರು

road

ಕಡಬ: ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ರಸ್ತೆಯನ್ನು ಅಗೆದು ಮೋರಿ ಹಾಕಿದ ಪರಿಣಾಮ ಕುಟ್ರುಪ್ಪಾಡಿ ಗ್ರಾಮದ ಹಳೇಸ್ಟೇಷನ್, ಪೊಟ್ಟುಕೆರೆ, ಹೊಸಕೆರೆ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸಾರ್ವಜನಿಕರು ಸಂಚರಿಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆ ಸರಿಪಡಿಸಿಕೊಡುವಂತೆ ಆಗ್ರಹಿಸಿ ಕಡಬ ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ.

ಹಳೇಸ್ಟೇಷನ್ ಹೊಸಕೆರೆಯಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚಾದಾಗ ಹತ್ತಿರದಲ್ಲಿಯೇ ಇರುವ ಪೊಟ್ಟುಕೆರೆಗೆ ಹರಿದುಹೋಗಲು ವ್ಯವಸ್ಥೆ ಇತ್ತು. ಆದರೆ ಅದನ್ನು ಹತ್ತಿರದ ಪಟ್ಟಾ ಸ್ಥಳದ ಇಬ್ಬರು ವ್ಯಕ್ತಿಗಳು ಮುಚ್ಚಿ ಹಾಕಿ ಪಂಚಾಯಿತಿ ರಸ್ತೆಯನ್ನು ಅಗೆದು ಹೊಸಕೆರೆಯಿಂದ ಪೊಟ್ಟುಕೆರೆಗೆ ಹೆಚ್ಚಿನ ನೀರು ಹರಿದುಹೋಗಲು ಸಣ್ಣ ಮೋರಿ ಹಾಕಿದ್ದಾರೆ. ಅದರಿಂದ ನೀರು ಸಮರ್ಪಕವಾಗಿ ಹರಿದುಹೋಗುತ್ತಿಲ್ಲ. ಮೋರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ರಸ್ತೆಯೂ ಕುಸಿದಿದೆ. ಅದರಿಂದಾಗಿ ಹೊಸಕೆರೆಯ ನೀರು ಹೆಚ್ಚಾಗಿ ಕ್ನಾನಾಯ ಜ್ಯೋತಿ ಶಾಲೆಯ ಹತ್ತಿರ ಕಡಬ-ಸುಬ್ರಹ್ಮಣ್ಯ ಮುಖ್ಯ ರಸ್ತೆಗೆ ಬರುವ ಸಾಧ್ಯತೆ ಇದೆ.

ಮಳೆಗಾಲದಲ್ಲಿ ಸಾರ್ವಜನಿಕರು ಸಂಚರಿಸುವ ರಸ್ತೆ ಅಗೆದುಹಾಕಿದ ಪರಿಣಾಮ ರಸ್ತೆ ಕೆಸರುಮಯವಾಗಿದ್ದು, ನಡೆದು ಹೋಗಲೂ ಸಾಧ್ಯವಾಗುತ್ತಿಲ್ಲ. ಈ ಎಲ್ಲ್ಲ ವಿಚಾರಗಳನ್ನು ಗ್ರಾಮಸ್ಥರು ಗ್ರಾ.ಪಂಗೆ ತಿಳಿಸಿದ್ದರೂ ಅವರು ರಸ್ತೆ ಅಗೆದು ಹಾಕಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ರಸ್ತೆ ಅಗೆದು ಹಾಕಿದವರಿಂದ ರಸ್ತೆ ಸರಿಪಡಿಸಿಕೊಡಲು ಗ್ರಾಪಂ ಆಡಳಿತ ಕ್ರಮ ಕೈಗೊಂಡಿಲ್ಲ. ಈ ಕುರಿತು ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಿಕೊಡಬೇಕೆಂದು ದೂರಿನಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೆರೆಯಲ್ಲಿ ನೀರು ತುಂಬಿ ಮೂರು ದಲಿತ ಕುಟುಂಬಗಳಿಗೆ ಜಲದಿಗ್ಬಂಧನ ಆಗಿತ್ತು. ಇದೀಗ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ನಾವು ಸ್ಥಳ ಪರಿಶೀಲನೆ ನಡೆಸಿದ್ದೇವೆ. ಮಳೆ ಸುರಿಯುತ್ತಿರುವುದರಿಂದ ಅಲ್ಲಿ ರಸ್ತೆ ದುರಸ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಅಗೆದವರಿಂದಲೇ ರಸ್ತೆಗೆ ದಪ್ಪ ಮರಳು(ಚರಳು) ಹಾಕಿಸಿ ಸರಿಪಡಿಸಿಕೊಡಲು ಸೂಚನೆ ನೀಡಿದ್ದೇವೆ.

– ಆನಂದ ಗೌಡ ಕುಟ್ರುಪ್ಪಾಡಿ ಗ್ರಾಪಂ ಪಿಡಿಒ

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…