ವಸಂತಿ ಕನೆಮಾರ್‌ಗೆ ಸಾಧನಾಶ್ರೀ ಪ್ರಶಸ್ತಿ

jci
ವಸಂತಿ ಕನೆಮಾರ್ ಅವರಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೇಸಿಐ ವಲಯ 15ರ ಅಧ್ಯಕ್ಷ ಗಿರೀಶ್ ಎಸ್.ಪಿ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಮುರಳಿ ಶ್ಯಾಂ ಪುತ್ತೂರು ಇದ್ದರು.
Published on

ಕಡಬ: ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಜೇಸಿಐ ವಲಯ 15ರ ವ್ಯವಹಾರ ಹಾಗೂ ಅಭಿವೃದ್ಧಿ ಸಮಾವೇಶದಲ್ಲಿ ಜೇಸಿಐ ಆಲಂಕಾರು ಘಟಕದ ಉಪಾಧ್ಯಕ್ಷೆ ವಸಂತಿ ಕನೆಮಾರು ಅವರು ವ್ಯವಹಾರ ಕ್ಷೇತ್ರದ ಅದ್ಭುತ ಸಾಧನೆಗಾಗಿ ಸಾಧನಾಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಉದಯೋನ್ಮುಖ ಉದ್ಯಮಿಯಾಗಿರುವ ಇವರು ಕೃಷಿ ಕೆಲಸದೊಂದಿಗೆ ವ್ಯವಹಾರ ನಿರ್ವಹಣೆ ಮಾಡುತ್ತಿರುವ ಸಾಧನೆ ಗುರುತಿಸಿ ಜೇಸಿಐ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೇಸಿಐ ವಲಯ 15ರ ಅಧ್ಯಕ್ಷ ಗಿರೀಶ್ ಎಸ್.ಪಿ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಮುರಳಿ ಶ್ಯಾಂ ಪುತ್ತೂರು, ಜೇಸಿಐ ಆಲಂಕಾರು ಘಟಕದ ಅಧ್ಯಕ್ಷೆ ಮಮತಾ ಅಂಬರಾಜೆ, ವಲಯ ತರಬೇತಿ ವಿಭಾಗದ ನಿರ್ದೇಶಕಿ ಹೇಮಲತಾ ಪ್ರದೀಪ್, ಆಲಂಕಾರು ಘಟಕದ ಮಹಿಳಾ ವಿಭಾಗದ ಸಂಯೋಜಕಿ ದೇವಕಿ ಹಿರಿಂಜ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net