

ಮಂಗಳುರು : ಕಲ್ಕೂರ ಪ್ರತಿಷ್ಠಾನ ಕಳೆದ ನಾಲ್ಕು ದಶಕಗಳಿಂದ ಶ್ರೀ ಕ್ಷೇತ್ರ ಕದ್ರಿಯಲ್ಲಿ ಆಯೋಜಿಸುತ್ತಿರುವ ಶ್ರೀ ಕೃಷ್ಣ ವೇಷ ಸ್ಪರ್ಧೆ
ಪೂರ್ವಭಾವಿ ಸಭೆ ನಗರದ ಶಾರದಾ ವಿದ್ಯಾಲಯದಲ್ಲಿ ನಡೆಯಿತು.
ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮತ್ತು ನಿವೃತ್ತ ಅಧ್ಯಾಪಕಿ ಸುಚೇತಾ ಜೋಷಿ ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ನೀಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ ಮಾತನಾಡಿ ‘ ಎಳೆಯ ಕಂದಮ್ಮಗಳಿಂದ ತೊಡಗಿ ಹೈಸ್ಕೂಲ್ವರೆಗಿನ ವಿದ್ಯಾರ್ಥಿಗಳ ವಿಭಾಗದ ಹಾಗೂ ಸಾರ್ವಜನಿಕ ವಿಭಾಗದ ಒಟ್ಟು 42 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆನ್‌ಲೈನ್ ಮೂಲಕವೂ ದೇಶ ವಿದೇಶಗಳಿಂದ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಸ್ಪರ್ಧೆಯ ಪ್ರಧಾನ ಸಂಯೋಜಕ ದಯಾನಂದ ಕಟೀಲ್ ತೀರ್ಪುಗಾರಿಕೆಯ ಕುರಿತು ಹಾಗೂ ಕಾರ್ಯಕರ್ತರ ಜವಾಬ್ದಾರಿಗಳನ್ನು ವಿವರಿಸಿದರು.
ಡಾ.ಎಂ.ಪ್ರಭಾಕರ ಜೋಷಿ, ಸುಧಾಕರ ರಾವ್ ಪೇಜಾವರ, ಶಶಿಪ್ರಭಾ ಐತಾಳ್, ಡಾ.ಮಂಜುಳಾ ಶೆಟ್ಟಿ, ರಾಮಕೃಷ್ಣ ರಾವ್, ಶಿವಪ್ರಸಾದ್ ಪ್ರಭು, ಭಾಸ್ಕರ ರೈ ಕುಕ್ಕುವಳ್ಳಿ, ಸುಮಾ ಪ್ರಸಾದ್, ಕೇಶವ ನಂದೊಡಿ, ಜನಾರ್ದನ ಹಂದೆ, ಸುಮಾ.ಎಸ್.ಮಾನ್ವಿ,
ಸುಜಾತಾ ಅಶೋಕ್, ಗೀತಾ ಲಕ್ಷ್ಮೀಶ್, ಕೃಷ್ಣಮೂರ್ತಿ ಉಡುಪ, ಲೀಲಾವತಿ ಎಂ., ಸರೋಜ ಕುಮಾರಿ, ನಿತ್ಯಾನಂದ ಕಾರಂತ, ಕೆ.ತಾರಾನಾಥ ಹೊಳ್ಳ, ಚಂದ್ರಶೇಖರ ಮಯ್ಯ, ಬಾಲಕೃಷ್ಣ ಐತಾಳ್, ಶ್ರೀಧರ ಹೊಳ್ಳ, ವಿದ್ಯಾಶ್ರೀ ಕಲ್ಕೂರ ಮುಂತಾದವರು ಉಪಸ್ಥಿತರಿದ್ದರು.