ಅಭಿಲಾಶ್‌ಗೆ ಸಾಧನಶ್ರೀ ಪ್ರಶಸ್ತಿ

sadhana
ಜೆಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ ವೈಭವದಲ್ಲಿ ಅಭಿಲಾಶ್ ಅವರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು
Published on

ಗಂಗೊಳ್ಳಿ: ಮಂಗಳೂರಿನಲ್ಲಿ ನಡೆದ ಜೆಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ ವೈಭವದಲ್ಲಿ ಜೆಸಿಐ ಕುಂದಾಪುರ ಸಿಟಿಯ ಪೂರ್ವ ಅಧ್ಯಕ್ಷ, ವಲಯದ ಆಡಳಿತ ವಿಭಾಗದ ನಿರ್ದೇಶಕ ಹಾಗೂ ಕುಂದಾಪುರ ಮೆಸ್ಕಾಂನ ಉದ್ಯೋಗಿ ಅಭಿಲಾಶ್ ಅವರಿಗೆ ಪ್ರತಿಷ್ಠಿತ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಲಯ ಅಧ್ಯಕ್ಷ ಗಿರೀಶ್ ಎಸ್ ಪಿ, ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ವ್ಯವಹಾರ ವಿಭಾಗದ ನಿರ್ದೇಶಕ ಸುನಿಲ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ, ಮುರುಳಿ ಶಾಮ್, ಅನಿಲ್, ಅಲನ್ ರೋಹನ್ ವಾಝ್, ಕುಂದಾಪುರ ಸಿಟಿ ಘಟಕದ ಅಧ್ಯಕ್ಷ ರಾಘವೇಂದ್ರ ಕುಲಾಲ್, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ನಿಕಟ ಪೂರ್ವ ಅಧ್ಯಕ್ಷ ಡಾ.ಸೋನಿ, ಪೂರ್ವಾಧ್ಯಕ್ಷ ರಾಘವೇಂದ್ರ ಚರಣ್ ನಾವಡ, ನಾಗೇಶ್ ನಾವಡ, ಸದಸ್ಯರಾದ ಜಗದೀಶ್ ಮಾಸ್ಟರ್, ಗಣೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net