

ತಲ್ಲೂರ: ತ್ಯಾಗ, ನಿಷ್ಠೆ, ಸಂಸ್ಕಾರ ಮತ್ತು ಪ್ರಾಮಾಣಿಕತೆಯ ಸಂಕೇತವಾಗಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಮಗೆಲ್ಲ ದಾರಿದೀಪವಾಗಿದ್ದಾರೆ ಎಂದು ಸಮುದಾಯದ ಮುಖಂಡ ವೆಂಕಣ್ಣ ಯರಡ್ಡಿ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಲ್ಲಮ್ಮಳ ತತ್ತ್ವ, ಸಿದ್ಧಾಂತ ಹಾಗೂ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಾರ್ಥಕ ಬದುಕು ತಮ್ಮದಾಗಿಸಿಕೊಂಡು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ಪಿಡಿಒ ಎಚ್.ಕೆ.ಚೌರಡ್ಡಿ ಮಾತನಾಡಿ, ಮನುಕುಲದ ಇತಿಹಾಸದಲ್ಲೇ ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಜತೆಗೆ ಕೌಟುಂಬಿಕ ಸಂಕಷ್ಟ ಮೆಟ್ಟಿ ನಿಂತ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸಾಮಾಜಿಕ ಚಿಂತನೆಯಲ್ಲಿ ಬದುಕಿನ ಆದರ್ಶ ಮೌಲ್ಯ ರೂಢಿಸಿಕೊಂಡು ಮಲ್ಲಮ್ಮ ಧಾರ್ಮಿಕ ಸಾಧನೆಗೈದಿದ್ದಾರೆ ಎಂದರು.
ಶಂಕರಯ್ಯ ಹಿರೇಮಠ, ಕಾರ್ಯದರ್ಶಿ ಸತೀಶ ಬಡಿಗೇರ, ಸದಸ್ಯ ಸಚಿನ ಹೋಳಿ, ನೀಲಕಂಠ ಶಿವಪೂಜಿ, ಲಣ ಅರಳಿಕಟ್ಟಿ, ಗಿರೀಶ ಯರಡ್ಡಿ, ಗೌಡಪ್ಪ ನಾಯ್ಕರ, ಕೃಷ್ಣಪ್ಪ ಚೌರಡ್ಡಿ, ರಮೇಶ ಕಮಕೇರಿ, ರಾಮಚಂದ್ರ ಅರಳಿಕಟ್ಟಿ, ಪುಟ್ಟು ಅರಳಿಕಟ್ಟಿ, ಈರಪ್ಪ ಅರೆಬೆಂಚಿ, ಯಮನಪ್ಪ ಅರೆಬೆಂಚಿ, ಅರುಣ ಚೌರಡ್ಡಿ, ಬಸಪ್ಪ ಕಮಕೇರಿ, ರಾು ಅರೆಬೆಂಚಿ, ಬಸವರಾಜ ಅರೆಬೆಂಚಿ, ಸೋಮನಿಂಗ ನಿಂಗನಗೌಡ್ರ, ವಿನಯ ಅರೆಬೆಂಚಿ ಹಾಗೂ ಸಿಬ್ಬಂದಿ ಇದ್ದರು.