ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಐಡಿ ತಂಡದವರು ಭಾನುವಾರ ನಗರದಲ್ಲಿ ಸಚಿನ್ ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಪರಿಶೀಲನೆ ನಡೆಸಿದರು.
ಡಿವೈಎಸ್ಪಿ ಅಸ್ಲಂಭಾಷಾ ನೇತೃತ್ವದ ತಂಡದವರು ನಗರದ ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ ಪ್ರದೇಶದ ಗೋಲಾ ಲೇಔಟ್‌ನಲ್ಲಿನ ಬಾಡಿಗೆ ಮನೆಯಲ್ಲಿ ಸುಮಾರು ಹೊತ್ತು ತಪಾಸಣೆ ನಡೆಸಿದರು. ಮನೆ ಅಕ್ಕ ಪಕ್ಕದವರ ಹೇಳಿಕೆ ಪಡೆದುಕೊಂಡು ಮಾಹಿತಿ ಕಲೆ ಹಾಕಿದರು.
ಕಲಬುರಗಿಯ ಸಿಐಡಿ ತಂಡದವರು ಇಲ್ಲಿನ ಮಾಹಿತಿ ಕಲೆ ಹಾಕಿ ವಿವರವಾದ ವರದಿಯನ್ನು ಬೆಂಗಳೂರು ಸಿಐಡಿ ತಂಡಕ್ಕೆ ರವಾನಿಸಿದರು. ಹೀಗಾಗಿ ಭಾನುವಾರ ಕಲಬುರಗಿಗೆಗೆ ಆಗಮಿಸಬೇಕಿದ್ದ ಬೆಂಗಳೂರು ಸಿಐಡಿ ತಂಡ ಬರಲಿಲ್ಲ. ಇಲ್ಲಿನ ಸಿಐಡಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆ ಮಾಲೀಕರನ್ನು ಭೇಟಿ ಮಾಡಿ ವಿವರ ಪಡೆದುಕೊಂಡರು. ಅಲ್ಲದೆ ಇನ್ನಿತರ ಕಡೆಗಳಲ್ಲಿ ಭೇಟಿ ನೀಡಿ ತನಿಖೆ ಪೂರ್ಣಗೊಳಿಸಿ ಮಾಹಿತಿ ನೀಡಿದರು.