ಪ್ರಿಯಕರನ ಜತೆ ವೈಮನಸ್ಸು, ದುಡುಕಿ ನಿರ್ಧಾರ ತೆಗೆದುಕೊಂಡ ಬೀದರ್‌ನ ಯುವ ವೈದ್ಯೆ ನೇಣಿಗೆ ಶರಣು!

lovefails
Published on

ಮಂಗಳೂರು: ಪ್ರೇಮ ವೈಫಲ್ಯವಾದುದಕ್ಕೆ ಮನನೊಂದುಕೊಂಡು ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ನಡೆದಿದೆ.

ಬೀದರ್ ಮೂಲದ ವೈಶಾಲಿ ಗಾಯಕ್ವಾಡ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇರಳಕಟ್ಟೆಯ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಈಕೆ ಇಂಟರ್ನ‌ಷಿಪ್‌ ಮಾಡುತ್ತಿದ್ದರು.

ಎಂಬಿಬಿಎಸ್ ಕಲಿಯುತ್ತಿದ್ದ ಕೇರಳದ ಪಾಲಕ್ಕಾಡ್ ನಿವಾಸಿ ಸುಜೀಶ್ ಎಂಬಾತನನ್ನು ವೈಶಾಲಿ ಪ್ರೀತಿಸುತ್ತಿದ್ದರು. ಆದರೆ ಈಚೆಗೆ ವೈಶಾಲಿ ಹಾಗೂ ಸುಜೀತ್ ನಡುವೆ ಉಂಟಾಗಿದ್ದ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ನೊಂದು ಇಂಥದ್ದೊಂದು ಭಯಾನಕ ಹೆಜ್ಜೆ ಇಟ್ಟಿದ್ದಾರೆ ಯುವವೈದ್ಯೆ.

ಪ್ರಿಯಕರ ಸುಜೀತ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net