

ರಾಯಚೂರು: ರಾಜ್ಯದ ಹಲವೆಡೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ನಿನ್ನೆ ರಾಯಚೂರು ಜಿಲ್ಲೆಯ ಗಜೇಂದ್ರಗಡ, ಕುಷ್ಟಗಿ ಭಾಗದಲ್ಲಿಯೂ ಭಾರಿ ಮಳೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ, ಮಸ್ಕಿ ಆಣೆಕಟ್ಟಿನಿಂದ ನೀರು ಬಿಡಲಾಗುತ್ತಿದೆ. ಮಸ್ಕಿ ನಾಲಾ ಯೋಜನೆಯಿಂದ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.
ಮುಂಜಾನೆ ಮಸ್ಕಿ ಪಟ್ಟಣದ ಬಳಿ ಹಳ್ಳದ ನೀರು ಕಡಿಮೆ ಇತ್ತು, ನೀರು ಹರಿದು ಬರುವುದರ ಮುನ್ಸೂಚನೆ ಇಲ್ಲದ ಕೆಲವರು ಮಾಮೂಲಿನಂತೆ ಇಂದು ನಸುಕಿನಲ್ಲಿ ಬಹಿರ್ದೆಸೆಗೆ ಹೋಗಿದ್ದಾರೆ. ಆದರೆ ಏಕಾಎಕಿ ನೀರು ಹರಿದುಬಿಡಲಾಗಿದೆ.
ಇದರಿಂದ ನೀರು ಭರ್ತಿಯಾಗಿಹೋಗಿದೆ. ಬಹಿರ್ದೆಸೆಗೆ ಹೋಗಿದ್ದ ಚನ್ನಬಸಪ್ಪ ಹಾಗೂ ಜಲೀಲ ಎಂಬಿಬ್ಬರು ಹಳ್ಳದ ಮಧ್ಯೆ ಸಿಲುಕಿಕೊಂಡು ಪರದಾಡುವ ಪರಿಸ್ಥಿತಿ ತಲೆದೋರಿತು.
ನಂತರ ವಿಷಯ ತಿಳಿದ ಅಗ್ನಿ ಶಾಮಕದಳ, ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.