ಅಭಿಮಾನಿಗಳಿಗೆ ಕಿಚ್ಚ ಕೊಟ್ರು ಗುಡ್​ನ್ಯೂಸ್​: ಶುರುವಾಯ್ತು ಬುಕ್ಕಿಂಗ್​- ಸುದೀಪ್​ ಹೇಳಿದ್ದೇನು ಕೇಳಿ...

vikranth
Published on

ಬೆಂಗಳೂರು: ನಟ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ. ಅದರಲ್ಲಿಯೂ ಸುದೀಪ್​ ಅಭಿಮಾನಿಗಳು ಕಳೆದ ಕೆಲ ತಿಂಗಳುಗಳಿಂದ ಚಾತಕ ಪಕ್ಷಿಯಂತೆ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಇದೇ 28ರಂದು ಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಕೌಂಟ್​ಡೌನ್​ ಶುರು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಕಾಣುತ್ತಿರುವ ಕನ್ನಡದ ಚಲನಚಿತ್ರವಾಗಿರುವ ವಿಕ್ರಾಂತ್​ ರೋಣ್​ದೇಶದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಒಂದು ಮಾಹಿತಿ ಪ್ರಕಾರ ಚಿತ್ರವು ಈವರೆಗಿನ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 3500 ಸ್ಕ್ರೀನ್​ಗಳಲ್ಲಿ ತೆರೆಕಾಣಲಿದೆ.

ಸಿನಿಮಾದ ಟ್ರೈಲರ್​ ಇತ್ತೀಚೆಗೆ ಬಿಡುಗಡೆಯಾದಾಗಲೇ ಭಾರಿ ಹವಾ ಸೃಷ್ಟಿಸಿತ್ತು ಈ ಚಿತ್ರ. ಇದರ ರಾ ರಾ ರಕ್ಕಮ್ಮ ಹಾಡಿಗೆ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರೂ ಸ್ಟೆಪ್​ ಹಾಕಿ ಖುಷಿಪಟ್ಟಿದ್ದಾರೆ.

ಇದೀಗ ಎಲ್ಲರಿಗೂ ಖುಷಿ ತರುವ ಸುದ್ದಿಯೊಂದನ್ನು ಖುದ್ದು ಸುದೀಪ್​ ನೀಡಿದ್ದು, ಈ ಕುರಿತು ಟ್ವೀಟ್​ ಮಾಡಿದ್ದಾರೆ. ಅದೇನೆಂದರೆ ಇವತ್ತಿನಿಂದ (ಜುಲೈ 24) ಈ ಚಿತ್ರದ ಟಿಕೆಟ್​ ಬುಕಿಂಗ್​ ಆರಂಭವಾಗಿದೆ. ಮಧ್ಯಾಹ್ನ 12 ಗಂಟೆಯಿಂದಲೇ ಬುಕಿಂಗ್​ ಶುರುವಾಗಿರುವುದಾಗಿ ಸುದೀಪ್​ ಹೇಳಿದ್ದಾರೆ.

ಚಿತ್ರವು ಜುಲೈ 28ರಂದು 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಬೆಂಗಳೂರು, ಮೈಸೂರು, ಹೈದರಾಬಾದ್​ ಸೇರಿದಂತೆ ಹಲವು ಕಡೆ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳದಲ್ಲಿ ಇನ್ನೂ ಬುಕಿಂಗ್​ ಶುರುವಾಗಲಿಲ್ಲ. ಉಳಿದವರು 'ಬುಕ್​ ಮೈ ಷೋ' ಆ್ಯಪ್ ಮೂಲಕ ಟಿಕೆಟ್​ ಬುಕ್ ಮಾಡಬಹುದಾಗಿದೆ.

ಈ ಚಿತ್ರ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 450 ಸ್ಕ್ರೀನ್‌, ತಮಿಳುನಾಡಿನಲ್ಲಿ 200 ಸ್ಕ್ರೀನ್‌ ಮತ್ತು ಕೇರಳದಲ್ಲಿ 150 ಸ್ಕ್ರೀನ್‌ ಗಳಲ್ಲಿ ಆರಂಭವಾಗಲಿದ್ದು, ಉತ್ತರ ಭಾರತ ಭಾಗದಲ್ಲಿ 1000 ಸ್ಕ್ರೀನ್‌ ಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಸದ್ಯ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net