ಲಂಚಕ್ಕೆ ಕೈಚಾಚಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ವಿಜಯಪುರದ ನೀರು ಸರಬರಾಜು ಮಂಡಳಿಯ ಇಂಜಿನಿಯರ್‌!

engineer
Published on

ವಿಜಯಪುರ: ಕಾರ್ಮಿಕರನ್ನು ಪೂರೈಕೆ ಮಾಡುವ ಗುತ್ತಿಗೆದಾರನಿಂದ ಲಂಚ ಪಡೆಯುವ ವೇಳೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ವಿಜಯಪುರದ ಸಹಾಯಕ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಾರ್ಮಿಕರ ಗುತ್ತಿಗೆದಾರ ಸಗರ ಎಂಬುವವರಿಂದ 50 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಬಾಬು ನದಾಫ್ ಸಿಕ್ಕಿಬಿದ್ದಿದ್ದಾರೆ. ಲಂಚ ಪಡಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿಯ ನಂತರ ನದಾಫ್‌ ಅವರನ್ನು ಬಂಧಿಸಲಾಗಿದೆ.

ಕಾರ್ಮಿಕರನ್ನು ಪೂರೈಕೆ ಮಾಡುವ ಸಂಬಂಧ ತಮ್ಮಿಂದ ಲಂಚ ಕೇಳುತ್ತಿರುವುದಾಗಿ ಗುತ್ತಿಗೆದಾರ ಸಗರ ಎನ್ನುವವರು ಎಸಿಬಿಗೆ ದೂರು ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾಲ ಬೀಸಿದ್ದರು. ಅವರು ಮಾಡಿದ ಪ್ಲ್ಯಾನ್‌ನಂತೆ ಸಗರ ಅವರು ಲಂಚದ ಹಣ ಕೊಡಲು ಹೋಗಿದ್ದರು. ಆ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳ ರೆಡ್‌ಹ್ಯಾಂಡ್‌ ಆಗಿ ಅರೆಸ್ಟ್‌ ಮಾಡಿದ್ದಾರೆ.

ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್, ಇನ್ಸ್ಪೆಕ್ಟರ್ ಗಳಾದ ಪರಮೇಶ್ವರ ಹಾಗೂ ಚಂದ್ರಕಲಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net