More

    ಕರೊನಾ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು: ಒಂದೇ ದಿನ ದುಪ್ಪಟ್ಟಾಯ್ತು ಸಂಖ್ಯೆ! ರಾಜ್ಯದಲ್ಲಿ 2,479 ಹೊಸ ಕೇಸ್‌

    ಬೆಂಗಳೂರು: ಎರಡೂ ಡೋಸ್‌ ಲಸಿಕೆ ಪಡೆದಿರುವ ಖುಷಿಯಲ್ಲಿ ಜನರು ಮೈಮರೆಯುತ್ತಿದ್ದಾರೋ ಅಥವಾ ಕರೊನಾ ಏನೂ ದೊಡ್ಡ ವಿಷಯವಲ್ಲ ಎಂದು ಅಸಡ್ಡೆ ಮಾಡುತ್ತಿದ್ದಾರೋ ಗೊತ್ತಿಲ್ಲ… ಒಟ್ಟಿನಲ್ಲಿ ರಾಜ್ಯದಲ್ಲಿ ಒಂದೇ ದಿನ ಕರೊನಾ ಸಂಖ್ಯೆಯಲ್ಲಿ ವಿಪರೀತ ಏರಿಕೆ ಕಂಡಿದ್ದರೆ, ಬೆಂಗಳೂರಿನ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

    ಬೆಂಗಳೂರಿನಲ್ಲಿ ನಿನ್ನೆ 1,041 ಕರೊನಾ ಕೇಸ್‌ ಪತ್ತೆಯಾಗಿತ್ತು, ಆದರೆ ಅದರ ಸಂಖ್ಯೆ ದುಪ್ಪಟ್ಟು ಆಗಿದ್ದು, ಇಂದು ಒಂದೇ ದಿನ ಕರೊನಾ ಸೋಂಕಿತರ ಸಂಖ್ಯೆ 2,053ಕ್ಕೆ ಏರಿದೆ. ಇದು ಬೆಂಗಳೂರು ಒಂದರ ಮಾತಾದರೆ ರಾಜ್ಯದ ವಿವಿಧ ಭಾಗಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ರಾಜ್ಯದಲ್ಲಿ ಸತತ ಮೂರು ದಿನಗಳಿಂದ 1 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿತ್ತು. ಆದರೆ

    ಒಂದು ಒಂದೇ ದಿನ 2,479 ಹೊಸ ಕೇಸ್‌ಗಳು ಪತ್ತೆಯಾಗಿದ್ದು ನಾಲ್ಕು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

    ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.2.59ಕ್ಕೆ ಏರಿಕೆಯಾಗಿದೆ. 95,391 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಆದರೆ ಒಂದೇ ಸಮಾಧಾನದ ಸಂಗತಿಯೆಂದರೆ ಹೊಸದಾಗಿ ಒಮಿಕ್ರಾನ್‌ ಸೋಂಕಿತರು ಪತ್ತೆಯಾಗಿಲ್ಲ.

    ಒಮಿಕ್ರಾನ್‌ಗಿಂತಲೂ ಭೀಕರ ವೈರಸ್‌ ‘ಐಎಚ್‌ಯು’ ಪತ್ತೆ- ಇದಾಗಲೇ 12 ಮಂದಿಗೆ ಸೋಂಕು

    ರೈಲಿನಲ್ಲಿರೋ ಶೌಚಗೃಹಕ್ಕೆ ಹೋದ ತಾಯಿ-ಮಗು ನಾಪತ್ತೆ! ಸಿಕ್ಕಿದ್ದು ಹಳಿಯ ಮೇಲೆ ಹೆಣವಾಗಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts