ದಂಪತಿ ಜಗಳ ಬಗೆಹರಿಸಲು ಹೋದವರಿಗೆ ಬೆಂಕಿ ಹಚ್ಚಿದ ಗಂಡ! ಓರ್ವನ ಸಾವು, ಮೂವರ ಸ್ಥಿತಿ ಗಂಭೀರ

vijayapura
Published on

ವಿಜಯಪುರ: ದಂಪತಿ ಜಗಳ ಬಿಡಿಸಲು ಹೋದ ಓರ್ವ ಕೊಲೆಯಾಗಿ ಮತ್ತೆ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.

ಹೆಂಡತಿ ವಿಚ್ಛೇದನ ಕೊಡಲಿಲ್ಲ ಎಂದು ಗಲಾಟೆ ಮಾಡಿದ್ದ ಶರಣಪ್ಪನನ್ನು ಸಮಾಧಾನಪಡಿಸಿ, ಬುದ್ಧಿ ಹೇಳಲು ಹೋದವರಿಗೆ ಈತ ಪೇಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ! ನಾಲ್ಕು ಜನರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ನಾಗಪ್ಪ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹಲವು ದಿನಗಳಿಂದ ಗಂಡ ಶರಣಪ್ಪ, ಹೆಂಡತಿ ಹುಲಗಮ್ಮ ಇಬ್ಬರು ಜಗಳವಾಡುತ್ತಿದ್ದರು. ಹುಲಗಮ್ಮ ತವರು ಮನೆಯ ನಾಲ್ಕು ಜನ ಬುದ್ದಿಮಾತು ಹೇಳಲು ಬಂದಿದ್ದರು. ಬುದ್ಧಿ ಮಾತು ಹೇಳಲು ಬಂದ ನಾಲ್ಕು ಜನರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಶರಣಪ್ಪ. ಸಿದ್ರಾಮಪ್ಪ, ಮುತ್ತಪ್ಪ, ಶರಣಪ್ಪ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.

ಕೊಡಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net