ಎಂಬಿಬಿಎಸ್‌, ನರ್ಸಿಂಗ್‌ ಪದವೀಧರರಿಗೆ ವೈದ್ಯ, ಶುಶ್ರೂಷಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

udyoga-mandya
Published on

ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಅಧೀನದಲ್ಲಿ ಕಾರ್ಯನಿರ್ವಹಿಸುವ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್​ -19 ಸಾಂಕ್ರಾಮಿಕ ರೋಗದ ನಿರ್ವಹಣೆ ಸಮಯದಲ್ಲಿ ರಚಿಸಲಾದ 6 ಐಸಿಯು ಬೆಡ್​ಗಳನ್ನು ಕಾರ್ಯಗತಗೊಳಿಸಿ ನಿರ್ವಹಿಸಲು ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಯು 30.9.2021ರ ವರೆಗೆ ತತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದಾಗಿದೆ.

ಮಂಡ್ಯ ಜಿಲ್ಲೆಯಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆ ಮದ್ದೂರು, ಮಳವಳ್ಳಿ ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್​.ಪೇಟೆ, ಪಾಂಡವಪುರ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬೇಕಿದ್ದು, ಪ್ರತಿ ಹುದ್ದೆಗೆ ಒಂದು ಪಾಳಿಗೆ ಒಬ್ಬರಂತೆ ನೇಮಕ ಮಾಡಿಕೊಳ್ಳಲಾಗುವುದು.

ಹುದ್ದೆ ವಿವರ

* ವೈದ್ಯಾಧಿಕಾರಿ

ಎಂಬಿಬಿಎಸ್​ ಮಾಡಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಮಾಸಿಕ ಒಬ್ಬ ವೈದ್ಯಾಧಿಕಾರಿಗೆ 60,000 ರೂ. ವೇತನ ನೀಡಲಾಗುವುದು. ಫಿಜಿಷಿಯನ್​ ಆದವರಿಗೆ ಮೊದಲ ಆದ್ಯತೆ ನೀಡಲಾಗುವುದು.

* ಶುಶ್ರೂಷಾಧಿಕಾರಿ

ಜಿಎನ್​ಎಂ/ ಬಿಎಸ್ಸಿ ನರ್ಸಿಂಗ್‌​ ಮಾಡಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಮಾಸಿಕ 25,000 ರೂ. ವೇತನ ಇದೆ.

ಸೂಚನೆ

ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಶೈಕ್ಷಣಿಕ ಮೂಲ ಅಂಕಪಟ್ಟಿ, ಎಲ್ಲ ಪ್ರಮಾಣ ಪತ್ರ, ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳೊಂದಿಗೆ ಹಾಗೂ ಸದರಿ ದಾಖಲೆಗಳ 2 ಸೆಟ್​ ಜೆರಾಕ್ಸ್​ ಪ್ರತಿಯೊಂದಿಗೆ ತರಬೇಕು.

ಸಂದರ್ಶನ ನಡೆಯುವ ದಿನಾಂಕ: 6.5.2021

ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮಂಡ್ಯ ಜಿಲ್ಲೆ. (ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ)

ಅಧಿಸೂಚನೆಗೆ: https://bit.ly/3vEyjzZ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net