ಎಸ್‌ಎಸ್ಎಲ್‌ಸಿ ಪಾಸಾದ ಮಹಿಳೆಯರಿಗೆ ಅಂಗನವಾಡಿಯಲ್ಲಿ 113 ಹುದ್ದೆಗಳಿಗೆ ಆಹ್ವಾನ

udyoga- anganawadi
Published on

ಬೀದರ್​ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 5 ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆ ಮಹಿಳೆಯರಿಂದ ಆನ್​ಲೈನ್​ ಅರ್ಜಿ ಆಹ್ವಾನಿಸಿದೆ.

ಕಾರ್ಯಕರ್ತೆಯರ ಹುದ್ದೆಗಳು: 17
ಸಹಾಯಕಿಯರ ಹುದ್ದೆಗಳು: 96
ಒಟ್ಟು: 113

ಬೀದರ್​ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಹುದ್ದೆಗಳು ಖಾಲಿ ಇದ್ದು, ಗೌರವಧನದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕ ಮಾಡಿಕೊಳ್ಳಲಾಗುವುದು. ಸಹಾಯಕಿ ಹುದ್ದೆಗೆ ಅಂಗವಿಕಲರು ಅರ್ಹರಾಗಿರುವುದಿಲ್ಲ. ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ (ತಹಸೀಲ್ದಾರ್​ ಕಚೇರಿಯಿಂದ ಪಡೆದದ್ದು), ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಆನ್​ಲೈನ್​ ಅಜಿರ್ಗಳಿಗೆ ಮಾತ್ರ ಮಾನ್ಯತೆ ಇದ್ದು, ದಾಖಲೆಗಳು ಅಸ್ಪಷ್ಟವಾಗಿದ್ದರೆ ಅರ್ಜಿ ತಿರಸ್ಕರಿಸಲಾಗುವುದು.

ಎಲ್ಲಿವೆ ಹುದ್ದೆಗಳು?
ಬೀದರ್​, ಬಾಲ್ಕಿ, ಬಸವಕಲ್ಯಾಣ, ಹುಮನಾಬಾದ, ಸಂತಪೂರ (ಔರಾದ್​) ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಗ್ರಾಮಗಳ ಅಂಗನವಾಡಿಗಳಲ್ಲಿ ಹುದ್ದೆಗಳು ಖಾಲಿ ಇವೆ.

* ಈ ಪ್ರಮಾಣಪತ್ರಗಳಿದ್ದಲ್ಲಿ ಸಲ್ಲಿಸಿ
ಅಭ್ಯರ್ಥಿಗಳು ವಿಧವೆ, ವಿಚ್ಛೇದಿತೆ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಯಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. ದೇವದಾಸಿಯರ ಮಕ್ಕಳು, ಅಂಗವಿಕಲರಾಗಿದ್ದಲ್ಲಿ ಸರ್ಕಾರದಿಂದ ದೃಢೀಕರಿಸಿದ ಪ್ರಮಾಣಪತ್ರ, ಪರಿತ್ಯಕ್ತೆ ಎಂದು ಗ್ರಾಪಂನಿಂದ ನೀಡಿದ ಪತ್ರ, ಯೋಜನಾ ನಿರಾಶ್ರಿತರಾಗಿದ್ದಲ್ಲಿ ತಹಸೀಲ್ದಾರ್​ರಿಂದ ಪಡೆದ ಪತ್ರಗಳನ್ನು ಅಜಿರ್ಯೊಂದಿಗೆ ಸಲ್ಲಿಸಬಹುದು. ಈ ಪ್ರಮಾಣಪತ್ರಗಳನ್ನು ಆಯಾ ಮೀಸಲಾತಿಗೆ ಪರಿಗಣಿಸಲಾಗುತ್ತದೆ.

ವಿದ್ಯಾರ್ಹತೆ: ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ, ಗರಿಷ್ಠ 9ನೇ ತರಗತಿ. ಕನ್ನಡ ಭಾಷೆ ಜ್ಞಾನ ಅವಶ್ಯ.

ವಯೋಮಿತಿ: ಕನಿಷ್ಠ 18ವರ್ಷ, ಗರಿಷ್ಠ 35 ವರ್ಷ. ಅಂಗವಿಕಲರಿಗೆ 10 ವರ್ಷ ವಯೋಸಡಿಲಿಕೆ ಇದೆ.

ಆದ್ಯತೆ: ವಿದ್ಯಾರ್ಹತೆ, ವಯೋಮಿತಿ, ಆಸಿಡ್​ ದಾಳಿಗೆ ತುತ್ತಾದವರು, ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದವರಿಗೆ, ವಿಧವೆಯರಿಗೆ, ಸ್ಥಳಿಯರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.

ಗೌರವಧನ
ಈ ನೇಮಕಾತಿಗಳು ಗೌರವಧನ ಆಧಾರಿತವಾಗಿವೆ. ಕಾರ್ಯಕರ್ತೆಗೆ ಮಾಸಿಕ 10,000 ರೂ, ಸಹಾಯಕಿಯರಿಗೆ 5,000 ರೂ. ವೇತನ ನಿಗದಿಯಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 31.7.2021
ಅಧಿಸೂಚನೆಗೆ: https://bit.ly/369mozz

ಮಾಹಿತಿಗೆ: https://anganwadirecruit.kar.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net