ಟೈಪಿಂಗ್‌ ಬಲ್ಲಿರಾ? ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇವೆ 150 ಟೈಪಿಸ್ಟ್‌ ಹುದ್ದೆಗಳು: ಅರ್ಜಿ ಆಹ್ವಾನ

high court
Published on

 ಬೆಂಗಳೂರಿನಲ್ಲಿರುವ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 150 ಬೆರಳಚ್ಚುಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರತಿಯನ್ನು ನ್ಯಾಯಾಲಯದ ವೆಬ್​ಸೈಟ್​ನಲ್ಲಿ ಪಡೆಯಬಹುದು. ಆರಂಭಿಕ 2 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ನಂತರ ಅವಶ್ಯಕತೆಗೆ ಅನುಗುಣವಾಗಿ ಮತ್ತೆ 2 ವರ್ಷ ಅವಧಿ ವಿಸ್ತರಿಸಬಹುದಾಗಿದೆ. ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆ ಸಮಯದಲ್ಲಿ ಉತ್ತಮ ನಡೆತೆಯ ಪ್ರಮಾಣಪತ್ರ ಸಲ್ಲಿಸಬೇಕು. ಹುದ್ದೆಗೆ ಆಯ್ಕೆಗೊಂಡ ನಂತರ ನಿರಪೇಕ್ಷಣಾ ಪತ್ರ ಸಲ್ಲಿಸಬೇಕು ಹಾಗೂ ಮೀಸಲಾತಿ ಕೋರುವ ಅಭ್ಯರ್ಥಿಗಳು ಸಂಬಂಧಿಸಿದ ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ಒಟ್ಟು ಹುದ್ದೆಗಳು: 150

ಏನು ಓದಿರಬೇಕು?: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ/ ಕಲೆ/ ವಾಣಿಜ್ಯ/ ವ್ಯವಹಾರ ನಿರ್ವಹಣೆ/ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯಗಳಲ್ಲಿ ಪದವಿ ಪಡೆದಿದ್ದು, ಕನಿಷ್ಠ ಶೇ.55 (ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಶೇ.50) ಅಂಕ ಪಡೆದಿರಬೇಕು. ಕನ್ನಡ ಹಾಗೂ ಆಂಗ್ಲ ಭಾಷೆ ಹಿರಿಯ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು. ಕಂಪ್ಯೂಟರ್ ಬೇಸಿಕ್ಸ್ ಕೋರ್ಸ್​ನ ಪ್ರಮಾಣಪತ್ರ ಹೊಂದಿರಬೇಕು.

ವೇತನ: ನ್ಯಾಯಾಲಯದ ಪರಿಷ್ಕೃತ ವೇತನ ಶ್ರೇಣಿ ನಿಯಮ 2018ರ ಅನುಸಾರ ಅಂಗೀಕೃತ ಭತ್ಯೆಗಳೊಂದಿಗೆ ಮಾಸಿಕ 25,500 ರೂ.ನಿಂದ 81,100 ರೂ. ವೇತನ ಇದೆ.

ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಸಾಮಾನ್ಯವರ್ಗದ ಅಭ್ಯರ್ಥಿಗೆ ಗರಿಷ್ಠ 35 ವರ್ಷ. ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಇತರ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಹುದ್ದೆಗಳ ವರ್ಗೀಕರಣ

* ಉಳಿಕೆ ಮೂಲವೃಂದ - 137 ಹುದ್ದೆಗಳು

ಸಾಮಾನ್ಯ ಅಭ್ಯರ್ಥಿಗೆ 68 ಸ್ಥಾನ, ಎಸ್ಸಿಗೆ 20, ಎಸ್ಟಿಗೆ 4, ಪ್ರವರ್ಗ 1ಕ್ಕೆ 6, ಪ್ರವರ್ಗ 2ಎಗೆ 21, ಪ್ರವರ್ಗ 2ಬಿಗೆ 5, ಪ್ರವರ್ಗ 3ಎಗೆ 6, 3ಬಿಗೆ 7 ಸ್ಥಾನಗಳನ್ನು ಮೀಸಲಿರಿಸಿದ್ದು, ಇದರಲ್ಲಿ ಮೀಸಲು ರಹಿತ 18 ಸ್ಥಾನ, ಮಹಿಳಾ ಆಭ್ಯರ್ಥಿಗೆ 50, ಗ್ರಾಮೀಣ ಅಭ್ಯರ್ಥಿಗೆ 35, ಕನ್ನಡ ಮಾಧ್ಯಮಕ್ಕೆ 9, ಅಂಗವಿಕಲರಿಗೆ 6, ಯೋಜನಾ ನಿರಾಶ್ರಿತರಿಗೆ 7, ಮಾಜಿ ಸೈನಿಕರಿಗೆ 12 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.

* ಸ್ಥಳೀಯ ವೃಂದ - 13 ಹುದ್ದೆಗಳು

ಸ್ಥಳೀಯ ವೃಂದದ ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 5, ಎಸ್ಸಿಗೆ 1, ಎಸ್ಟಿಗೆ 2, ಪ್ರವರ್ಗ 1ಕ್ಕೆ 1, ಪ್ರವರ್ಗ 2ಎಗೆ 2, 2ಬಿಗೆ 1, 3ಎಗೆ 1 ಹುದ್ದೆ ಮೀಸಲಿರಿಸಲಾಗಿದೆ. ಇದರಲ್ಲಿ ಮೀಸಲು ರಹಿತ 2 ಸ್ಥಾನ, ಮಹಿಳಾ ಅಭ್ಯರ್ಥಿಗೆ 6, ಗ್ರಾಮೀಣ ಅಭ್ಯರ್ಥಿಗೆ 3, ಯೋಜನಾ ನಿರಾಶ್ರಿತರಿಗೆ 1, ಇತರರಿಗೆ 1 ಸ್ಥಾನ ಕಾಯ್ದಿರಿಸಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಅರ್ಹತೆಯ ಆಧಾರದ ಮೇಲೆ ಬೆರಳಚ್ಚು ಪರೀಕ್ಷೆ, ಮೌಖಿಕ ಪರೀಕ್ಷೆಗೆ ಆಹ್ವಾನಿಸಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲಿನ ಪ್ರಧಾನ ಪೀಠ/ ಧಾರವಾಡ/ ಕಲಬುರಗಿಯಲ್ಲಿನ ಪೀಠಗಳಲ್ಲಾಗಲಿ ನಿಯೋಜಿಸಬಹುದಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯವರ್ಗ, ಪ್ರವರ್ಗ-2ಎ, 2ಬಿ, 3ಎ, 3ಬಿಗೆ 350 ರೂ., ಎಸ್ಸಿ, ಎಸ್ಟಿ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ನ.30ರ ಒಳಗಾಗಿ ಆನ್​ಲೈನ್ ಅಥವಾ ಚಲನ್ ಮೂಲಕ ಶುಲ್ಕ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 27.11.2021

ಅಧಿಸೂಚನೆಗೆ: https://bit.ly/3jJAsah

ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಕೆಗೆ: http://karnatakajudiciary.kar.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net