ದೂರಸಂಪರ್ಕ, ತಂತ್ರಜ್ಞಾನ ಇಲಾಖೆಯಲ್ಲಿವೆ 20 ಹುದ್ದೆಗಳು: ವಿವಿಧ ಪದವೀಧರರಿಗೆ ಆಹ್ವಾನ

ITI
Published on

ಐಟಿಐ ಲಿಮಿಟೆಡ್ 1948ರಲ್ಲಿ ದೂರಸಂಪರ್ಕ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿ ಸ್ಥಾಪನೆಯಾದ ಸಾರ್ವಜನಿಕ ವಲಯ ಉದ್ಯಮವಾಗಿದೆ. ಬೆಂಗಳೂರು, ನೈನಿ, ರಾಯ್ಬರೇಲಿ, ಮಂಕಾಪುರ ಮತ್ತು ಪಾಲಕ್ಕಾಡ್​ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ದೂರಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಪೂರೈಸುವ ಹಾಗೂ ಹೊಸ ಪೀಳಿಗೆಯ ಟೆಲಿಕಾಂ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಪ್ರಸ್ತುತ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಕನಿಷ್ಠ 5 ವರ್ಷದ ಅವಧಿಗೆ ಒಳಪಟ್ಟಿದೆ.

ಹುದ್ದೆ ವಿವರ

* ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಇಂಜಿನಿಯರ್ (ಎಇಇ-ಗ್ರೇಡ್ 2)- 12

* ಡೆಪ್ಯುಟಿ ಮ್ಯಾನೇಜರ್/ ಮ್ಯಾನೇಜರ್ (ಗ್ರೇಡ್ 4/5) - 8

ಕೆಲಸದ ವಿವರ/ ಇತರ ಅರ್ಹತೆಗಳು

* ಮೊಬೈಲ್ ನೆಟ್​ವರ್ಕ್ ನಿಯೋಜನೆಯಲ್ಲಿ ಅನುಭವ- ಮುಖ್ಯವಾಗಿ 4ಜಿ ತಂತ್ರಜ್ಞಾನ ಮತ್ತು ಆರ್​ಎಫ್​ನಲ್ಲಿ ಜ್ಞಾನ ಹೊಂದಿರಬೇಕು.

* ಎಸ್​ಎಸಿಎಫ್​ಎ ಹಾಗೂ ಡಬ್ಲ್ಯುಪಿಸಿ ಜ್ಞಾನ

* ಟೆಲಿಕಾಂ ಇಂಡಸ್ಟ್ರಿಯಲ್ಲಿ ಪರಿಣಿತಿ

* ಸಿಗ್ನಲ್ ಸಿಸ್ಟಮ್್ಸ ಮತ್ತು ತಂತ್ರಜ್ಞಾನದ ಕಾರ್ಯಾಚರಣೆಯ ಜ್ಞಾನ

* ಫೈಬರ್ ಆಪ್ಟಿಕ್ ಮತ್ತು ಎಸಿಸಿಇಎಸ್​ಎಸ್ ನೆಟ್​ವರ್ಕ್​ಗಳ ಜ್ಞಾನ

* ಎಂಎಂಇ, ಇಪಿಸಿ, ಎಚ್​ಎಸ್​ಎಸ್, ಎಸ್​ಜಿಡಬ್ಲ್ಯು ನಂತಹ ಅಂಶಗಳೊಂದಿಗೆ ಕೋರ್ ನೆಟ್​ವರ್ಕ್​ನ ಜ್ಞಾನ

* ಆರ್​ಎಎನ್ ಮತ್ತು ಟಿಎಕ್ಸ್ ನೋಡ್​ನ ಏಕೀಕರಣ ಮತ್ತು ಕಾರ್ಯಾರಂಭ

* ಆರ್​ಎಎನ್ ಮತ್ತು ಮೈಕ್ರೋವೇವ್​ನ ವಿನ್ಯಾಸ ಮತ್ತು ಅನುಷ್ಠಾನವನ್ನು ವಿತರಿಸುವುದು.

* ಟೆಲಿಕಾಂ ಟವರ್ ಕಟ್ಟಡದ ತಾಂತ್ರಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವುದು

* ಆಂಟೆನಾಗಳು, ಸಿಒಎಕ್ಸ್ ಮತ್ತು ಫೈಬರ್ ಆಪ್ಟಿಕ್ ಕೇಬಲ್​ಗಳನ್ನು ಪರೀಕ್ಷಿಸುವುದು ಸೇರಿ ಇತರ ಜವಾಬ್ದಾರಿಗಳಿರುತ್ತದೆ.

ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್/ ಟೆಲಿಕಮ್ಯುನಿಕೇಷನ್/ ಕಂಪ್ಯೂಟರ್ ಸೈನ್ಸ್/ ಇನ್​ಫಮೇಷನ್ ಟೆಕ್ನಾಲಜಿ ಇಂಜಿನಿಯರಿಂಗ್​ನಲ್ಲಿ ಬಿಇ/ ಬಿ.ಟೆಕ್ ಪದವಿ ಪಡೆದಿದ್ದು, ಸಾಮಾನ್ಯವರ್ಗ ಅಭ್ಯರ್ಥಿಗಳು ಶೇ.60, ಮೀಸಲಾತಿ ಆಭ್ಯರ್ಥಿಗಳು ಶೇ.58 ಅಂಕ ಪಡೆದಿರಬೇಕು. ಕನಿಷ್ಠ ವೃತ್ತಿ ಅನುಭವ ಕೇಳಲಾಗಿದೆ.

ವಯೋಮಿತಿ: ಎಇಇ ಹುದ್ದೆಗೆ ಗರಿಷ್ಠ 30 ವರ್ಷ, ಮ್ಯಾನೇಜರ್ ಹುದ್ದೆಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಮ್ಯಾನೇಜರ್ ಗ್ರೇಡ್4 ಹುದ್ದೆಗೆ ಮಾಸಿಕ 65,195 ರೂ., ಗ್ರೇಡ್ 5ಗೆ ಮಾಸಿಕ 72,717 ರೂ. ಹಾಗೂ ಎಇಇಗೆ ಮಾಸಿಕ 43,129 ರೂ. ವೇತನ ಜತೆ ಗ್ರಾಚುಟಿ, ಪಿಎಫ್, ವೈದ್ಯಕೀಯ ಸೌಲಭ್ಯ, ರಜೆ ಭತ್ಯೆ ಹಾಗೂ ಇತರ ಸೌಕರ್ಯ ಹಾಗೂ ಭತ್ಯೆ ನೀಡಲಾಗುವುದು.

ಆನ್​ಲೈನ್ ಅರ್ಜಿ ಸಲ್ಲಿಸಲು ಕೊನೇ ದಿನ: 11.11.2021

ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 15.11.2021

ಅಂಚೆ ವಿಳಾಸ: ENERAL MANAGER-HR ITI LIMITED, REGD & CORPORATE OFFICE ITI BHAVAN, DOORAVANI NAGAR, BENGALURU – 560016

ಅಧಿಸೂಚನೆಗೆ: https://bit.ly/2ZIxgVD

ಮಾಹಿತಿಗೆ:  http://www.itiltd.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net