ಯೂಕ್ರೇನ್‌ನಿಂದ ಮನೆಗೆ ಬಂದ ರಾಯಚೂರು ವಿದ್ಯಾರ್ಥಿಗಳು: ಗುಂಡೇಟಿಗೆ ಬಲಿಯಾದ ನವೀನ್‌ ಸ್ನೇಹಿತರಿವರು

raichur
Published on

ರಾಯಚೂರು: ಯೂಕ್ರೇನ್‌ನಲ್ಲಿ ಎಂಬಿಬಿಎಸ್‌ ಓದಲು ತೆರಳಿದ್ದ ರಾಯಚೂರಿನ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಯನ್ನು ತಲುಪಿದ್ದಾರೆ.

ಈಚೆಗೆ ಯೂಕ್ರೇನ್‌ನಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಹಾವೇರಿಯ ನವೀನ್‌ ಸ್ನೇಹಿತರಾಗಿರುವ ಪ್ರಜ್ವಲ್ ಹೂಗಾರ್ ಹಾಗೂ ರುಬಿನಾ ಮನೆಯನ್ನು ಸೇರಿಕೊಂಡಿದ್ದಾರೆ. ಇವರಿಬ್ಬರೂ ಯೂಕ್ರೇನ್‌ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ತೆರಳಿದ್ದರು.

ಕಾರ್ಕೀವ್ ನಗರದಲ್ಲಿ ಸಿಲುಕಿದ್ದ ಈ ಇಬ್ಬರು ವಿದ್ಯಾರ್ಥಿಗಳನ್ನು ಪಾಲಕರು ಆರತಿ ಬೆಳಗಿ ಬರಮಾಡಿಕೊಂಡಿದ್ದಾರೆ. ಪ್ರಜ್ವಲ್ ಮನೆಗೆ ಆಗಮಿಸ್ತಿದ್ದಂತೆ ಕುಟುಂಬಸ್ಥರು ಭಾವುಕರಾಗಿದ್ದು, ಅಜ್ಜ- ಅಜ್ಜಿ ಮೊಮ್ಮಗನನ್ನ ಕಂಡು ತಬ್ಬಿ ಮುದ್ದಾಡಿದ್ದಾರೆ. ಈ ವೇಳೆ ಪ್ರಜ್ವಲ್‌ ಅಜ್ಜ, ಅಜ್ಜಿಯರನ್ನು ಸಂತೈಸಿದ್ದಾನೆ.

ಇತ್ತ ರುಬಿನಾ ಮನೆಗೆ ಬರುತ್ತಿದ್ದಂತೆಯೇ ಅಪ್ಪ- ಅಮ್ಮ ಮಗಳ ಕಾಲು ತೊಳೆದು, ಆರತಿ ಬೆಳಗಿ ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net