ಪಿ ಲವ್ಸ್‌ ಎಲ್‌: ದೇವ್ರೆ ಈ ಬಾಳೆಹಣ್‌ ತಗೊಂಡು ನನ್ ‌ಹುಡ್ಗಿ ನಂಗೆ ಸಿಗೋ ಹಾಗೆ ಮಾಡಪ್ಪಾ ತಂದೆ...

banana
Published on

ತುಮಕೂರು: ಭಕ್ತರು ವಿಭಿನ್ನ ರೀತಿಯಲ್ಲಿ ದೇವರ ಮೊರೆ ಹೋಗುತ್ತಾರೆ, ವಿಧವಿಧ ರೀತಿಯಲ್ಲಿ ಹರಕೆ ತೀರಿಸುತ್ತಾರೆ. ಇಲ್ಲೊಬ್ಬ ಪ್ರೇಮಿ ಬಾಳೆಹಣ್ಣನ್ನು ದೇವರಿಗೆ ಅರ್ಪಿಸುವ ಮೂಲಕ ಅದರಲ್ಲಿ ತನ್ನ ಪ್ರೀತಿಯ ನಿವೇದನೆ ಮಾಡಿ ಸುದ್ದಿಯಾಗಿದ್ದಾನೆ.

ತುಮಕೂರಿನ ತಿಪಟೂರಿನಲ್ಲಿ ನಡೆದ ಜಾತ್ರೆಯೊಂದರಲ್ಲಿ ಈ ಯುವಕ ಬಾಳೆಹಣ್ಣಿನ ಮೇಲೆ ತನ್ನ ಪ್ರೀತಿ ನಿವೇದನೆ ಮಾಡಿಕೊಂಡು ಅದನ್ನು ರಥಕ್ಕೆ ಎಸೆದಿದ್ದಾನೆ. ಈ ಬಾಳೆಹಣ್ಣು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

“ನಮ್ಮುಡುಗಿ ಜೊತೆ ಮದುವೆ ಆಗಲಿ” ಪಿ ಲವ್ ಎಲ್ ಎಂದು ಬಾಳೆಹಣ್ಣಿನಲ್ಲಿ ಬರೆದಿದ್ದಾನೆ. ನಂತರ ಅದನ್ನು ರಥಕ್ಕೆ ಎಸೆಯುವ ಮೂಲಕ ದೇವರಲ್ಲಿ ತನ್ನ ಕೋರಿಕೆ ಈಡೇರಿಸು ಎಂದು ಬೇಡಿಕೊಂಡಿದ್ದಾನೆ. ದೇವರು ಈತನ ಆಸೆ ಈಡೇರಿಸುತ್ತಾರೋ, ‘ಎಲ್‌’ ಹುಡುಗಿ ಆತನಿಗೆ ಸಿಗುತ್ತಾಳೋ ಎನ್ನುವುದು ಮಾತ್ರ ತಿಳಿಯುವುದು ಕಷ್ಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net