

ಬೆಂಗಳೂರು: ಮಳೆ ಅನಾಹುತ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈ ಕಾರ್ಯಪಡೆಯಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.
ಸ್ವಿಜರ್ಲೆಂಡ್‌ನ ದಾವೋಸ್ ಪ್ರವಾಸಕ್ಕೆ ತೆರಳುವ ಮುನ್ನ ಇಂಥದ್ದೊಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ದಾವೋಸ್ಗೆ ತೆರಳಲಿರುವ ಸಿಎಂ ಬೊಮ್ಮಾಯಿಗೆ ಸಚಿವರಾದ ಕೆ.ಗೋಪಾಲಯ್ಯ ಹಾಗೂ ಮುನಿರತ್ನ ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು.
ವಲಯಗಳ ಜಂಟಿ ಆಯುಕ್ತರು ಈ ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಕಾರ್ಯಪಡೆ ನೇತೃತ್ವದ ವಿವರ ಇಂತಿದೆ.
ಆರ್ ಅಶೋಕ್- ದಕ್ಷಿಣ ವಲಯ
ಡಾ.ಅಶ್ವಥ್ ನಾರಾಯಣ್- ಪೂರ್ವ ವಲಯ
ವಿ ಸೋಮಣ್ಣ- ಪಶ್ಚಿಮ ವಲಯ
ಎಸ್ ಟಿ ಸೋಮಶೇಖರ್ -ಆರ್ ಆರ್ ನಗರ ವಲಯ
ಬೈರತಿ ಬಸವರಾಜ್- ಮಹದೇವಪುರ ವಲಯ
ಗೋಪಾಲಯ್ಯ -ಬೊಮ್ಮನಹಳ್ಳಿ ವಲಯ
ಮುನಿರತ್ನ -ಯಲಹಂಕ ಮತ್ತು ದಾಸರಹಳ್ಳಿ ವಲಯ