ಶಾಲೆಗಳಿಗೆ ಬೇಸಿಗೆ ರಜೆ ಕಟ್- ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯೂ ಬಿಡುಗಡೆ: ಇಲ್ಲಿದೆ ಫುಲ್​ ಡಿಟೇಲ್ಸ್​

holiday1
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಗೆ ಶಾಲಾ-ಕಾಲೇಜುಗಳ ತರಗತಿಗಳು ಸರಿಯಾಗಿ ನಡೆಯಲಿಲ್ಲ. ಇದರಿಂದ ಎಷ್ಟೋ ಶಾಲೆಗಳಲ್ಲಿನ ಅದರಲ್ಲಿಯೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ.

ಇದನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ 2022-23ರ ಅವಧಿಯಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ;ವನ್ನು ಸರ್ಕಾರ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ ಬೇಸಿಗೆ ರಜೆಯನ್ನು ಸ್ವಲ್ಪ ಕಡಿಮೆ ಮಾಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದೇ ರೀತಿ 1-9ನೇ ತರಗತಿಗೆ ಯಾವಾಗ ವಾರ್ಷಿಕ ಪರೀಕ್ಷೆ ನಡೆಸಬೇಕು ಎಂಬ ಬಗ್ಗೆ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಅದರ ವಿವರ ಹೀಗಿದೆ:

ಬೇಸಿಗೆ ರಜೆಯು ಏಪ್ರಿಲ್​ 10 ರಿಂದ ಮೇ 15ರವರೆಗೆ ಇರಲಿದೆ. ಮೇ 16ರಿಂದ ಶಾಲೆಗಳು ಆರಂಭವಾಗಲಿವೆ.

1-9ನೇ ತರಗತಿಯ ಪರೀಕ್ಷೆ ವೇಳಾಪಟ್ಟಿ:

1 ರಿಂದ 5 ಮತ್ತು 1ರಿಂದ 7/8 ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಲ್ಲಿ ಮಾರ್ಚ್​ 24ರಿಂದ ಏಪ್ರಿಲ್​ 4ರವರೆಗೆ;

8-9ನೇ ತರಗತಿಗಳು ಇರುವ ಪ್ರೌಢಶಾಲೆಗಳಲ್ಲಿ ಮಾರ್ಚ್​ 21ರಿಂದ ಮಾರ್ಚ್​ 26ರವರೆಗೆ ವಿಷಯವಾರು ಪರೀಕ್ಷೆಗಳು ಮತ್ತು ಮಾರ್ಚ್​ 29ರಂದು ಭಾಗ-2 (ದೈಹಿಕ ಶಿಕ್ಷಣ ಮತ್ತು ಇತರ) ಪರೀಕ್ಷೆಗಳು ನಡೆಯಲಿವೆ.

ಇದರ ಹೊರತಾಗಿ ಶಾಲೆಗಳ ಚಟುವಟಿಕೆಗಳ ಸಂಪೂರ್ಣ ವಿವರ ಈ ಕೆಳಗಿನ ಲಿಸ್ಟ್​ನಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net