VIDEO: ಸಮಸ್ತ ಕನ್ನಡಿಗರಿಗೆ ನಮಸ್ಕಾರ... ಇವತ್ತಿನಿಂದ ನಾನು ರಾಧಿಕಾ ಕುಮಾರಸ್ವಾಮಿ ಎನ್ನುವ ಹೊಸ....

1239836
Published on

ಬೆಂಗಳೂರು: ಒಬ್ಬಳು ಮಗು ಹುಟ್ಟಿದ ಮೇಲೂ ಅದೇ ಗ್ಲಾಮರ್​ನಿಂದ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡವರು ನಟಿ ರಾಧಿಕಾ ಕುಮಾರಸ್ವಾಮಿ. ಕಾರಣಾಂತರಗಳಿಂದ ಕೆಲ ವರ್ಷ ಬ್ರೇಕ್​ ತೆಗೆದುಕೊಂಡಿದ್ದ ರಾಧಿಕಾ, ಇದೀಗ ಮತ್ತು ಕಮ್​ಬ್ಯಾಕ್​ ಆಗಿದ್ದು, ದಮಯಂತಿ ಸಿನಿಮಾದ ಮೂಲಕ ಮತ್ತೆ ಸಖತ್​ ಸೌಂಡ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ರಾಧಿಕಾ, ನೃತ್ಯ ಪಟು ಕೂಡ. ಇವರ ಹೆಸರಿನಲ್ಲಿ ಹಲವಾರು ಅಕೌಂಟ್​ಗಳು ಇವೆ. ಆದರೆ ಇದನ್ನೆಲ್ಲವನ್ನೂ ಅವರ ಅಭಿಮಾನಿಗಳು ಹ್ಯಾಂಡಲ್​ ಮಾಡುತ್ತಿದ್ದಾರೆ. ಇದೀಗ ರಾಧಿಕಾ ಅವರು ಖುದ್ದು ಅಭಿಮಾನಿಗಳ ಜತೆ ಸಂಪರ್ಕದಿಂದ ಇರಲು ಬಯಸುತ್ತಿದ್ದಾರೆ. ಆದ್ದರಿಂದ ಪ್ರತ್ಯೇಕ ಫೇಸ್​ಬುಕ್​ ಅಕೌಂಟ್​ ಮಾಡಲು ನಿರ್ಧರಿಸಿದ್ದಾರೆ.

ಈ ಕುರಿತು ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ.. ಸಮಸ್ತ ಕನ್ನಡಿಗರಿಗೆ ನಮಸ್ಕಾರ... ಇವತ್ತಿನಿಂದ ನಾನು ರಾಧಿಕಾ ಕುಮಾರಸ್ವಾಮಿ ಎನ್ನುವ ಹೊಸ ಫೇಸ್​ಬುಕ್​ ಅಕೌಂಟ್​ ತೆರೆಯುತ್ತಿದ್ದೇನೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಡಿಡಿಜೆ ಕಾರ್ಯಕ್ರಮದ ಫಿನಾಲೆ ದಿನ ಪ್ರಪ್ರಥಮ ಬಾರಿಗೆ ನನ್ನ ಪೇಜ್​ನಿಂದ ಲೈವ್​ ಬರುತ್ತೇನೆ. ನಿಮಗೆ ಯಾವುದೇ ಪ್ರಶ್ನೆ ಕೇಳಬೇಕು ಅಂದರೆ ನೇರವಾಗಿ ನನ್ನ ಕೇಳಬಹುದು. ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ. ನನ್ನ ಪೇಜ್​​ನ ಲೈಕ್​ ಮಾಡಿ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

ರಾಧಿಕಾ ಏನು ಹೇಳಿದ್ದಾರೆ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net